ದೇಶ

ಲಂಡನ್ ನ ಭಾಷಣದಲ್ಲಿ ಸಾವರ್ಕರ್ ವಿರುದ್ಧ ತಪ್ಪು ಆರೋಪ: ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮತ್ತೊಂದು ಮೊಕದ್ದಮೆ 

Srinivas Rao BV

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಒಂದರ ನಂತರ ಒಂದು ಮಾನನಷ್ಟ ಮೊಕದ್ದಮೆಗಳು ದಾಖಲಾಗುತ್ತಿವೆ. 

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗ ಈಗ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 

ರಾಹುಲ್ ಗಾಂಧಿ ತಮ್ಮ ಲಂಡನ್ ಭಾಷಣದಲ್ಲಿ ವಿ.ಡಿ ಸಾವರ್ಕರ್ ವಿರುದ್ಧ ತಪ್ಪಾಗಿ ಆರೋಪ ಮಾಡಿದ್ದಕ್ಕೆ ಈ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಸತ್ಯಕಿ ಸಾವರ್ಕರ್ ತಿಳಿಸಿದ್ದು, ಅವರ ಪರ ವಕೀಲರು ಸಿಟಿ ಕೋರ್ಟ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಕೋರ್ಡ್ ಅಧಿಕಾರಿ ಇಂದು ಗೈರು ಹಾಜರಾಗಿದ್ದ ಕಾರಣ ಪ್ರಕರಣದ ಸಂಖ್ಯೆ ಪಡೆಯಲು ಶನಿವಾರ ಆಗಮಿಸುವಂತೆ ಸೂಚಿಸಲಾಗಿದೆ ಇನ್ನೂ ಕೇಸ್ ಸಂಖ್ಯೆ ಸಿಕ್ಕಿಲ್ಲ ಎಂದು ಸತ್ಯಕಿ ಸಾವರ್ಕರ್ ಹೇಳಿದ್ದಾರೆ. 

ಲಂಡನ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಸಾವರ್ಕರ್ ವಿಷಯವನ್ನು ಪ್ರಸ್ತಾಪಿಸಿದ್ದರು. "ತಾವು ಹಾಗೂ ತಮ್ಮ 5-6 ಮಂದಿ ಸ್ನೇಹಿತರು ಸೇರಿ ಓರ್ವ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದೆವು ಆಗ ತಮಗೆ ಸಂತೋಷವಾಗಿತ್ತು" ಎಂದು ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದಿರುವುದಾಗಿ ರಾಹುಲ್ ಗಾಂಧಿ ಸಭೆಗೆ ತಿಳಿಸಿದ್ದರು.
 
ಈ ಘಟನೆಯನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ ಇದು ಹೇಡಿತನವಲ್ಲವೇ ಎಂದು ಪ್ರಶ್ನಿಸಿದ್ದರು. ರಾಹುಲ್ ಗಾಂಧಿ ಉಲ್ಲೇಖಿಸಿದ್ದ ಈ ಪ್ರಕರಣ ಕಲ್ಪಿತವಾದದ್ದು ಸಾವರ್ಕರ್ ಜೀವನದಲ್ಲಿ ಇಂಥಹ ಘಟನೆ ನಡೆದಿರಲಿಲ್ಲ. ಸಾವರ್ಕರ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಮುಸ್ಲಿಮರಿಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವಂತೆ ಸಾವರ್ಕರ್ ಸಲಹೆ ನೀಡುತ್ತಿದ್ದರು ಎಂದು ಸತ್ಯಕಿ ಹೇಳಿದ್ದಾರೆ. 

SCROLL FOR NEXT