ದೇಶ

200 ದಿನಗಳ ಬಳಿಕ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ: 19 ಮಂದಿ ಸಾವು

Srinivas Rao BV

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,158 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 19 ಮಂದಿ ಸಾವನ್ನಪ್ಪಿದ್ದಾರೆ.
 
200 ದಿನಗಳ ನಂತರ ದೇಶದಲ್ಲಿ ಕೋವಿಡ್-19 ಪ್ರಕರಣಗಳು 10,158 ರ ಗಡಿ ದಾಟಿದ್ದು, 222 ದಿನಗಳಲ್ಲೇ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ 24 ಗಂಟೆಗಳಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ.
 
XBB.1.16 ಉಪ-ರೂಪಾಂತರಿ ಮೊದಲ ಬಾರಿಗೆ ಪತ್ತೆಯಾದ ಮಹಾರಾಷ್ಟ್ರದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ, ನಂತರದ ಸ್ಥಾನದಲ್ಲಿ ಗುಜರಾತ್ ಇದ್ದು ಇಬ್ಬರು ಸಾವನ್ನಪ್ಪಿದ್ದಾರೆ.  ದೆಹಲಿ, ಕೇರಳ, ರಾಜಸ್ಥಾನ, ತಮಿಳುನಾಡು, ಕೇರಳಗಳಲ್ಲಿ ತಲಾ 1 ಸಾವು ಸಂಭವಿಸಿದೆ. ಈ ಹಿಂದೆ 2022 ರ ಆಗಸ್ಟ್ 31 ರಂದು 10,000 ಪ್ರಕರಣಗಳು ವರದಿಯಾಗಿತ್ತು. 

ಕೋವಿಡ್ ಡೇಟಾ ವಿಶ್ಲೇಷಕರಾದ ಕೃಷ್ಣ ಪ್ರಸಾದ್ ಎನ್ ಸಿ, ಪ್ರಕಾರ, ರಾಜಸ್ಥಾನ (87%), ಕೇರಳ (81%), ಕರ್ನಾಟಕ (33%), ಮಹಾರಾಷ್ಟ್ರ (21%), ಛತ್ತೀಸ್‌ಗಢ (23%), ಪಂಜಾಬ್ (22%), ಮತ್ತು ಗೋವಾ ( 14%) ಗಳಲ್ಲಿ ಕಳೆದ 24 ಗಂಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

“ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ, ವೈರಾಣು ಬದಲಾಗುತ್ತಿದೆ ಮತ್ತು ಜನರ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿರುವುದು ಕಾರಣ ಎಂದು ಡಾ. ಪ್ರಗ್ಯಾ ಯಾದವ್ ತಿಳಿಸಿದ್ದಾರೆ.
 
ಭಾರತವನ್ನು ಹೊರತುಪಡಿಸಿ, ಮರುಸಂಯೋಜಿತ ರೂಪಾಂತರಿಸಿದರೆ XBB.1.16  ಇತರ ದೇಶಗಳಲ್ಲಿಯೂ ಸಹ ಉಲ್ಬಣಿಸುತ್ತಿದೆ. "ನಾವು ಓಮಿಕ್ರಾನ್‌ನ 1,000 ರೂಪಾಂತರಗಳನ್ನು ನೋಡಿದ್ದೇವೆ ಮತ್ತು ವೈರಸ್ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ" ಎಂದು ಕೋವಿಡ್ -19 ಲಸಿಕೆ ಕೋವಾಕ್ಸಿನ್  ಅಭಿವೃದ್ಧಿಪಡಿಸುವಲ್ಲಿ ಮಾಡಿದ ಕೆಲಸಕ್ಕಾಗಿ ಪ್ರಶಸ್ತಿ ಪಡೆದ ಯಾದವ್ ಹೇಳಿದ್ದಾರೆ. 

XBB.1.16 ಪರಿಣಾಮಕಾರಿಯಾಗಿ ತನ್ನ ವೈರಾಣು ಸಂಖ್ಯೆಯನ್ನು (Re)  ಹೆಚ್ಚಿಸಿಕೊಳ್ಳುತ್ತಿದ್ದು, ಇದು XBB.1 ಮತ್ತು XBB.1.5 ಗಿಂತ ಕ್ರಮವಾಗಿ 1.27- ಮತ್ತು 1.17 ಪಟ್ಟು ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ. XBB.1.16 ಶೀಘ್ರದಲ್ಲೇ ಪ್ರಪಂಚದಾದ್ಯಂತ ಹರಡುತ್ತದೆ ಎಂಬುದನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT