ದೇಶ

27 ಡಿಎಂಕೆ ನಾಯಕರು 2 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾರೆ: ಅಣ್ಣಾಮಲೈ

Nagaraja AB

ಚೆನ್ನೈ: ತಮಿಳುನಾಡಿನ  ಡಿಎಂಕೆಯ 27 ನಾಯಕರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಡಿಎಂಕೆ  ಫೈಲ್ಸ್ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅಣ್ಣಾಮಲೈ, ದಿವಂಗತ ಕರುಣಾನಿಧಿ, ಸ್ಟಾಲಿನ್, ಅವರ ಸಹೋದರಿ ಕನಿಮೋಳಿ, ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್, ಅವರ ಪುತ್ರ ಹಾಗೂ ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್, ಶಬರೇಶನ್ (ಸ್ಟಾಲಿನ್ ಅವರ ಅಳಿಯ), ಸೆಂತಾಮರೈ (ಸ್ಟಾಲಿನ್ ಸಹೋದರಿ) ಮುರಸೋಲಿ ಮಾರನ್, ದಯಾನಿಧಿ ಮಾರನ್ (ಸ್ಟಾಲಿನ್ ಅವರ ಸೋದರ ಸಂಬಂಧಿಗಳು) ಅಳಗಿರಿ (ಕರುಣಾನಿಧಿ ಅವರ ಮಗ) ಅವರ ಅಕ್ರಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದರು. 

ಈ ಆರೋಪಗಳು ಮತ್ತು ಸಂಪತ್ತು ಕ್ರೋಢೀಕರಣದ ಕುರಿತು ಸಿಬಿಐಗೆ ವಿವರವಾದ ಅರ್ಜಿಯನ್ನು ಸಲ್ಲಿಸುವುದಾಗಿ ಅವರು ಹೇಳಿದರು.

ಮೊದಲನೇ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಮುಂದಿನ ಭಾಗಗಳನ್ನು ಸರಣಿಯಲ್ಲಿ ತರಲಾಗುವುದು, ಈ ಬಿಟ್ಟಿರುವ ವಿಡಿಯೋದಲ್ಲಿ ಆಸ್ತಿ ವಿವರಗಳನ್ನು ಮಾತ್ರ ನೀಡಲಾಗಿದೆ. ಮುಂದಿನ ವಿಡಿಯೋದಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು. 

SCROLL FOR NEXT