ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅರೆಬರೆ ಬಟ್ಟೆ ಧರಿಸಿ 'ಶೂರ್ಪನಖಿ'ಯಂತೆ ಕಾಣುವ ಯುವತಿಯರು ಹೇಳಿಕೆ: ಬಿಜೆಪಿ ನಾಯಕನ ವಿರುದ್ಧ ಕೆರಳಿ ಕೆಂಡವಾದ ಸಂಸದೆ ಮೋಯಿತ್ರಾ!

ಅರೆಬರೆ ಬಟ್ಟೆಗಳನ್ನು ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೈಲಾಶ್ ವಿಜಯ್ ವರ್ಗೀಯ, ಮಹುವಾ ಮೋಯಿತ್ರಾ
Nagaraja AB
Updated On : 14 Apr 2023, 6:36 pm

ಕೋಲ್ಕತ್ತಾ: ಅರೆಬರೆ ಬಟ್ಟೆಗಳನ್ನು ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತ ವಿಡಿಯೋವೊಂದನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವ ಮೊಯಿತ್ರಾ, ಶುಕ್ರವಾರ ಬೆಳಗ್ಗೆ ಬಿಜೆಪಿ ನಾಯಕರು ಮತ್ತು ಭಕ್ತರಿಗೆ ಒಂದು ಸಂದೇಶವಿದೆ. ನಾವು ಬೆಂಗಾಲಿ ಮಹಿಳೆಯರು ನಮಗೆ ಏನು ಬೇಕೊ ಅದನ್ನು ಹಾಕಿಕೊಳ್ಳುತ್ತೇವೆ, ನಮಗೆ ಏನು ಬೇಕೊ ಅದನ್ನು ತಿನ್ನುತ್ತೇವೆ. ನಮಗೆ ಯಾರನ್ನು ಪೂಜೆಸಬೇಕೆನಿಸುತ್ತದೆೋ ಅವರನ್ನು ಪೂಜೆಸುತ್ತೇವೆ. ನಮ್ಮ ಬಟ್ಟೆಗಳು ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕೆಟ್ಟ ಬಟ್ಟೆ ಧರಿಸಿ ಶೂರ್ಪನಖಿಯಂತೆ ಕಾಣ್ತೀರಾ; ದೇವರು ಸುಂದರ ದೇಹ ಕೊಟ್ಟಿದ್ದಾನೆ ಒಳ್ಳೆ ಬಟ್ಟೆ ಧರಿಸಿ: ಬಿಜೆಪಿ ನಾಯಕ

Advertisement

Advertisement

ಮಧ್ಯಪ್ರದೇಶದ ಇಂದೋರ ನಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೈಲಾಶ್ ವಿಜಯ ವರ್ಗೀಯ, ರಾತ್ರಿ ವೇಳೆ ಹೊರಗೆ ಹೋಗುವಾಗ ಅನೇಕ ಯುವತಿಯರು ಕುಡಿದು ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ಮಹಿಳೆಯರು ಮತ್ತು ಯುವತಿಯರನ್ನು ನಾವು ದೇವತೆಗಳೆಂದು ಕರೆಯುತ್ತೇವೆ. ಅರೆಬರೆ ಬಟ್ಟೆ ಧರಿಸಿ ಓಡಾಡುವ ಯುವತಿಯರು ರಾಕ್ಷಸಿ ಶೂರ್ಪನಖಿ ಹಾಗೆ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಭಾರೀ ಟೀಕೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments