ದೇಶ

ಗುಜರಾತ್ ನಲ್ಲಿ ನರಬಲಿ: ಸ್ವಯಂ ಶಿರಚ್ಛೇದ ಮಾಡಿಕೊಂಡ ದಂಪತಿ!

Srinivas Rao BV

ರಾಜ್ ಕೋಟ್: ಗುಜರಾತ್ ನಲ್ಲಿ ನರಬಲಿಯ ಭಿಭತ್ಸ ಕೃತ್ಯ ವರದಿಯಾಗಿದ್ದು, ಸ್ವಯಂ ಶಿರಚ್ಛೇದ ಮಾಡಿಕೊಂಡಿದ್ದಾರೆ. 

ಈ ಘಟನೆ ಗುಜರಾತ್ ನ ರಾಜ್ ಕೋಟ್ ಜಿಲ್ಲೆಯಲ್ಲಿ ನಡೆದಿದ್ದು,  ಹೇಮುಭಾಯ್ ಮಕ್ವಾನ (38) ಹಾಗೂ ಆತನ ಪತ್ನಿ ಹಂಸಬೆನ್ (35) ಮೃತಪಟ್ಟಿರುವ ದಂಪತಿಯಾಗಿದ್ದು, ಸ್ವಯಂ ಶಿರಚ್ಛೇದನಕ್ಕೆ ತಾವು ಮನೆಯಲ್ಲಿಯೇ ಉಪಕರಣ ತಯಾರಿಸಿದ್ದರು ಎಂದು ತಿಳಿದುಬಂದಿದೆ. 

ಸಬ್ ಇನ್ಸ್ಪೆಕ್ಟರ್ ಇಂದ್ರಜೀತ್ ಸಿಂಗ್ ಜಡೇಜಾ ನೀಡಿರುವ ಮಾಹಿತಿಯ ಪ್ರಕಾರ, ದಂಪತಿ ತಮ್ಮ ಶಿರಚ್ಛೇದವಾಗುತ್ತಿದ್ದಂತೆಯೇ ತಲೆಗಳು ಹೋಮಕುಂಡಕ್ಕೆ ಬೀಳುವಂತೆ ಯೋಜನೆ ರೂಪಿಸಿದ್ದರು.
 

SCROLL FOR NEXT