ದೇಶ

ವಿಂಗ್ ಕಮಾಂಡರ್ ದೀಪಿಕಾಗೆ ಶೌರ್ಯ ಪ್ರಶಸ್ತಿ, ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಮಹಿಳೆ

Lingaraj Badiger

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ ಅವರು ಗುರುವಾರ ಶೌರ್ಯ ಪ್ರಶಸ್ತಿ ಪಡೆದಿದ್ದು, ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿ ಪಡೆದ ಐಎಎಫ್ ನ ಮೊದಲ ಮಹಿಳಾ ಪೈಲಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಐಎಎಫ್ ವಕ್ತಾರರ ಪ್ರಕಾರ, ರಾಜಸ್ಥಾನ ಮೂಲದ ದೀಪಿಕಾ ಅವರು, ಹೆಲಿಕಾಪ್ಟರ್ ಪೈಲಟ್ ಆಗಿದ್ದು, ಮಧ್ಯಪ್ರದೇಶದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರದರ್ಶಿಸಿದ "ಅಸಾಧಾರಣ ಧೈರ್ಯ"ಕ್ಕೆ ವಾಯುಸೇನಾ ಪದಕ(ಶೌರ್ಯ) ನೀಡಿ ಗೌರವಿಸಲಾಗಿದೆ.

ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ನವದೆಹಲಿಯ ಸುಬ್ರೊಟೊ ಪಾರ್ಕ್‌ನಲ್ಲಿರುವ ಏರ್ ಫೋರ್ಸ್ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಹಲವಾರು ಅಧಿಕಾರಿಗಳು ಮತ್ತು ವಾಯುಪಡೆ ಯೋಧರಿಗೆ ಯುದ್ಧ ಸೇವಾ ಪದಕ ಮತ್ತು ಇತರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಇಬ್ಬರು ಐಎಎಫ್ ಅಧಿಕಾರಿಗಳು ಯುದ್ಧ ಸೇವಾ ಪದಕವನ್ನು ಪಡೆದರೆ, 13 ಅಧಿಕಾರಿಗಳು ಮತ್ತು ವಾಯುಪಡೆ ಯೋಧರು ವಾಯುಸೇನಾ ಪದಕ(ಶೌರ್ಯ), 13 ಅಧಿಕಾರಿಗಳು ವಾಯುಸೇನಾ ಪದಕ ಮತ್ತು 30 ವಿಶಿಷ್ಟ ಸೇವಾ ಪದಕಗಳನ್ನು ಪಡೆದರು ಎಂದು ವಕ್ತಾರರು ತಿಳಿಸಿದ್ದಾರೆ.

SCROLL FOR NEXT