ಸಾಂದರ್ಭಿಕ ಚಿತ್ರ 
ದೇಶ

ಚಂದ್ರ ದರ್ಶನ, ನಾಳೆ ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ

ಶುಕ್ರವಾರ ಸಂಜೆ ಚಂದ್ರ ದರ್ಶನವಾದ ಕಾರಣ ರಂಜಾನ್ ಉಪವಾಸದ ಅಂತ್ಯವನ್ನು ಸೂಚಿಸುವ ಈದ್-ಉಲ್-ಫಿತರ್ ಹಬ್ಬವನ್ನು ನಾಳೆ ದೇಶಾದ್ಯಂತ ಆಚರಿಸಲಾಗುತ್ತದೆ.

ನವದೆಹಲಿ: ಶುಕ್ರವಾರ ಸಂಜೆ ಚಂದ್ರ ದರ್ಶನವಾದ ಕಾರಣ ರಂಜಾನ್ ಉಪವಾಸದ ಅಂತ್ಯವನ್ನು ಸೂಚಿಸುವ ಈದ್-ಉಲ್-ಫಿತರ್ ಹಬ್ಬವನ್ನು ನಾಳೆ ದೇಶಾದ್ಯಂತ ಆಚರಿಸಲಾಗುತ್ತದೆ.

ದೇಶದ ಅನೇಕ ಕಡೆಗಳಲ್ಲಿ ಚಂದ್ರ ದರ್ಶನವಾಗಿರುವ ಬಗ್ಗೆ ಮಸೀದಿಯ ರುಯೆಟ್-ಇ-ಹಿಲಾಲ್ ಸಮಿತಿಯು ವಿವಿಧ ಮಸೀದಿಗಳಿಗೆ ಮಾಹಿತಿ ನೀಡಿದ್ದು, ಶನಿವಾರ ದೇಶದಲ್ಲಿ ಈದ್ ಆಚರಿಸಲಾಗುವುದು ಎಂದು ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರಮ್ ಅಹ್ಮದ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭ್ರಾತೃತ್ವ ಮತ್ತು ಸೌಹಾರ್ದತೆಯ ಹಬ್ಬವಾಗಿ ಈದ್- ಉಲ್ -ಫಿತರ್ ಆಚರಿಸಲಾಗುತ್ತಿದೆ ಎಂದು ತಿಳಿಸಿದ ಅಹ್ಮದ್, ದೇಶದಲ್ಲಿ 75 ವರ್ಷಗಳಿಂದ ಇರುವ ಸಹೋದರತೆ ಮತ್ತು ಸೌಹಾರ್ದತೆ ನಿರಂತರವಾಗಿ ಮುಂದುವರಿಯಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ ಎಂದರು.ಉತ್ತರ ಪ್ರದೇಶದ ಹಲವಾರು ಸ್ಥಳಗಳಲ್ಲಿ ಚಂದ್ರನ ದರ್ಶನವಾಗಿದ್ದು, ನಾಳೆ ಈದ್ ಆಚರಿಸಲಾಗುವುದು ಎಂದು ಲಕ್ನೋದ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ನಲ್ಲಿ ಶವ್ವಾಲ್ ತಿಂಗಳ ಆರಂಭವನ್ನು ಸೂಚಿಸುವ ಚಂದ್ರನ ದರ್ಶನದಿಂದ ಈಧ್ ಉಲ್-ಫಿತರ್ ಆಚರಣೆ ದಿನವನ್ನು ನಿರ್ಧರಿಸಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT