ದೇಶ

400ಕ್ಕೂ ಹೆಚ್ಚು ಎಲ್ ಜಿಬಿಟಿಯ ಪೋಷಕರಿಂದ ಸಿಜೆಐ ಗೆ ಪತ್ರ; ಮಕ್ಕಳಿಗೆ ವಿವಾಹ ಸಮಾನತೆ ಕೊಡುವಂತೆ ಮನವಿ

Srinivas Rao BV

ನವದೆಹಲಿ: ಎಲ್ ಜಿಬಿಟಿ ಸಮುದಾಯದ ಪೈಕಿ 400 ಮಂದಿಯ ಪೋಷಕರು ಸಿಜೆಐ ಡಿ.ವೈ ಚಂದ್ರಚೂಡ್ ಗೆ ಪತ್ರ ಬರೆದಿದ್ದು, ತಮ್ಮ ಎಲ್ ಜಿಬಿಟಿಕ್ಯೂಐಎ++ ನ ಮಕ್ಕಳಿಗೆ ವಿವಾಹ ಸಮಾನತೆಯ ಹಕ್ಕನ್ನು ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. 

ಡಿ.ವೈ ಚಂದ್ರಚೂಡ್ ಅವರ ನೇತೃತ್ವದ ಪೀಠ ಸಲಿಂಗಕಾಮಿಗಳ ವಿವಾಹ ಹಕ್ಕುಗಳಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸುತ್ತಿದೆ. ಸ್ವೀಕಾರ್- ದಿ ರೈನ್ಬೋ ಪೇರೆಂಟ್ಸ್ ನಿಂದ ಸಿಜೆಐ ಗೆ ಪತ್ರ ರವಾನಿಸಲಾಗಿದ್ದು, 

ದೇಶದಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ನಮ್ಮ ಮಕ್ಕಳು ಹಾಗೂ ಅವರ ಸಂಗಾತಿಗಳ ಸಂಬಂಧಕ್ಕೆ ಕಾನೂನು ಮಾನ್ಯತೆ ಸಿಗುವುದನ್ನು ನಾವು ಬಯಸುತ್ತಿದ್ದೇವೆ. ವೈವಿಧ್ಯತೆಯನ್ನು ಗೌರವಿಸುವ ಮತ್ತು ಮೌಲ್ಯಕ್ಕಾಗಿ ನಿಂತಿರುವ ನಮ್ಮಂತಹ ರಾಷ್ಟ್ರ ನಮ್ಮ ಮಕ್ಕಳಿಗೂ ವಿವಾಹ ಸಮಾನತೆಯ ಕಾನೂನು ದ್ವಾರವನ್ನು ತೆರೆಯುತ್ತದೆ ಎಂಬ ಖಾತ್ರಿ ನಮಗೆ ಇದೆ. 

ನಮಗೆ ವಯಸ್ಸಾಗುತ್ತಿದೆ. ನಮ್ಮಲ್ಲಿ ಕೆಲವರು ಶೀಘ್ರದಲ್ಲೇ 80 ವರ್ಷಕ್ಕೆ ತಲುಪುತ್ತಾರೆ. ನಮ್ಮ ಜೀವಿತಾವಧಿಯಲ್ಲಿ ನಮ್ಮ ಮಕ್ಕಳ ಕಾಮನಬಿಲ್ಲಿನ ವಿವಾಹಕ್ಕೆ  ಕಾನೂನು ಅನುಮೋದನೆಯನ್ನು ನಾವು ನೋಡುತ್ತೇವೆ ಎಂದು ನಾವು ಭಾವಿಸುತ್ತೇವೆ" ಎಂದು ಪೋಷಕರ ಗುಂಪು ತನ್ನ ಪತ್ರದಲ್ಲಿ ತಿಳಿಸಿದೆ.

'ಸ್ವೀಕರ್-ದಿ ರೇನ್ಬೋ ಪೇರೆಂಟ್ಸ್' ಎಂಬುದು ಭಾರತೀಯ LGBTQIA++ (ಸಲಿಂಗಿ, ದ್ವಿಲಿಂಗಿ, ಮಂಗಳಮುಖಿ, ಕ್ವೀರ್, ಇಂಟರ್‌ಸೆಕ್ಸ್, ಪ್ಯಾನ್ಸೆಕ್ಸುವಲ್) ಮಕ್ಕಳ ಪೋಷಕರಿಂದ ರಚಿಸಲ್ಪಟ್ಟ ಗುಂಪು ಆಗಿದೆ. 

ವಿವಾಹ ಸಮಾನತೆಯನ್ನು ಪರಿಗಣಿಸುವಂತೆ ನಾವು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ಪೋಷಕರು ಮನವಿ ಮಾಡಿದ್ದಾರೆ.  ಲಿಂಗ ಮತ್ತು ಲೈಂಗಿಕತೆಯ ಬಗ್ಗೆ ತಿಳಿದುಕೊಳ್ಳುವುದರಿಂದ ಹಿಡಿದು, ನಮ್ಮ ಮಕ್ಕಳ ಜೀವನವನ್ನು ಅರ್ಥಮಾಡಿಕೊಳ್ಳುವವರೆಗೆ, ಅಂತಿಮವಾಗಿ ಅವರ ಲೈಂಗಿಕತೆ ಮತ್ತು ಅವರ ಪ್ರೀತಿಪಾತ್ರರನ್ನು ಸ್ವೀಕರಿಸುವವರೆಗೆ - ಪೋಷಕರು ಎಲ್ಲಾ ರೀತಿಯ ಭಾವನೆಗಳನ್ನೂ ಎದುರಿಸಿದ್ದಾರೆ. "ಮದುವೆ ಸಮಾನತೆಯನ್ನು ವಿರೋಧಿಸುವವರೆಡೆಗೆ ನಾವು ಸಹಾನುಭೂತಿ ಹೊಂದಿದ್ದೇವೆ, ಏಕೆಂದರೆ ಅಂಥವರು ನಮ್ಮಲ್ಲಿಯೂ ಕೆಲವರು ಸಹ ಇದ್ದರು.

ನಮ್ಮ LIGTQIA ++ ಮಕ್ಕಳ  ಜೀವನ, ಅವರ ಭಾವನೆಗಳು ಮತ್ತು ಅವರ ಆಸೆಗಳು ಸಂಮಂಜಸವಾಗಿದೆ ಎಂದು ಅರಿತುಕೊಳ್ಳಲು ನಮಗೆ ಶಿಕ್ಷಣ, ಚರ್ಚೆ ಮತ್ತು ತಾಳ್ಮೆ ಬೇಕಾಯಿತು. ಅದೇ ರೀತಿ ವಿವಾಹ ಸಮಾನತೆಯನ್ನು ವಿರೋಧಿಸುವವರೂ  ಒಪ್ಪುತ್ತಾರೆ ಎಂದು ಆಶಿಸುತ್ತೇವೆ. ನಾವು ಭಾರತದ ಜನರು, ಸಂವಿಧಾನ ಮತ್ತು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದೇವೆ" ಎಂದು ಅದು ಹೇಳಿದೆ. 

SCROLL FOR NEXT