ಮೋದಿ 
ದೇಶ

ಅದಾನಿ, ಚೀನಾ ಬಗ್ಗೆ 'ಮೌನ್ ಕಿ ಬಾತ್': ಮೋದಿ 100ನೇ 'ಮನ್ ಕಿ ಬಾತ್'ಗೆ ಕಾಂಗ್ರೆಸ್ ಟಾಂಗ್

ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಭಾಷಣ 'ಮನ್ ಕಿ ಬಾತ್' ನ 100ನೇ ಸಂಚಿಕೆಗಾಗಿ ಅವರ ಸಾರ್ವಜನಿಕ ಸಂಪರ್ಕ ಯಂತ್ರವು "ಹೆಚ್ಚುವರಿ ಕೆಲಸ ಮಾಡುತ್ತಿದೆ". ಆದರೆ ಅದಾನಿ ಮತ್ತು ಚೀನಾದಂತಹ ನಿರ್ಣಾಯಕ ವಿಷಯಗಳ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಭಾಷಣ 'ಮನ್ ಕಿ ಬಾತ್' ನ 100ನೇ ಸಂಚಿಕೆಗಾಗಿ ಅವರ ಸಾರ್ವಜನಿಕ ಸಂಪರ್ಕ ಯಂತ್ರವು "ಹೆಚ್ಚುವರಿ ಕೆಲಸ ಮಾಡುತ್ತಿದೆ". ಆದರೆ ಅದಾನಿ ಮತ್ತು ಚೀನಾದಂತಹ ನಿರ್ಣಾಯಕ ವಿಷಯಗಳ ಬಗ್ಗೆ ಮೌನವಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.

'ಮನ್ ಕಿ ಬಾತ್'ನ 100ನೇ ಆವೃತ್ತಿಯು ಮುಂದಿನ ಭಾನುವಾರ ಪ್ರಸಾರವಾಗಲು ಸಿದ್ಧವಾಗಿದೆ. ಮಾಸಿಕ ರೇಡಿಯೊ ಭಾಷಣದ ಈ ಯಶಸ್ಸಿಗೆ ಸಾರ್ವಜನಿಕ ಬೆಂಬಲ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ರೋಹ್ಟಕ್‌ನ ಸಮೀಕ್ಷೆಯ ಪ್ರಕಾರ, ಸುಮಾರು 23 ಕೋಟಿ ಜನರು ಪ್ರತಿ ತಿಂಗಳ ಕೊನೆಯ ಭಾನುವಾರದಂದು 'ಮನ್ ಕಿ ಬಾತ್' ಕಾರ್ಯಕ್ರಮ ಆಲಿಸುತ್ತಾರೆ ಮತ್ತು 65 ಪ್ರತಿಶತ ಕೇಳುಗರು ಹಿಂದಿಯಲ್ಲಿ ಭಾಷಣವನ್ನು ಕೇಳಲು ಬಯಸುತ್ತಾರೆ ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಜೈರಾಮ್ ರಮೇಶ್ ಅವರು, "ಪ್ರಧಾನಿ ಅವರ ಪ್ರಬಲ ಪಿಆರ್ ಯಂತ್ರ ಏಪ್ರಿಲ್ 30 ರಂದು 100ನೇ 'ಮನ್ ಕಿ ಬಾತ್' ಪ್ರಸಾರ ಮಾಡಲು ಹೆಚ್ಚಿನ ಸಮಯ ಕೆಲಸ ಮಾಡುತ್ತಿದೆ. ಏತನ್ಮಧ್ಯೆ, ಇದು ಅದಾನಿ, ಚೀನಾ, ಸತ್ಯಪಾಲ್ ಮಲಿಕ್ ಬಹಿರಂಗಪಡಿಸಿದ ಪುಲ್ವಾಮಾ ದಾಳಿ, ಎಂಎಸ್‌ಎಂಇಗಳ ನಾಶ ಮತ್ತು ಇತರ ನಿರ್ಣಾಯಕ ವಿಷಯಗಳಿಗೆ ಸಂಬಂಧಿಸಿದಂತೆ  'ಮೌನ್ ಕಿ ಬಾತ್' ಆಗಿದೆ ಎಂದು ಟಾಂಗ್ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!