ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

36 ಜನರಿದ್ದ ಎನ್ಐಒ ಸಂಶೋಧನಾ ಹಡಗನ್ನು ರಕ್ಷಿಸಿದ ಕಡಲ ಕೋಸ್ಟ್ ಗಾರ್ಡ್; ತೈಲ ಸೋರಿಕೆ ತಡೆ

ಕ್ಷಿಪ್ರಗತಿಯ ಕಾರ್ಯಾಚರಣೆ ಕೈಗೊಂಡ ಭಾರತೀಯ ಕೋಸ್ಟ್ ಗಾರ್ಡ್, ಸಂಭಾವ್ಯ ವಿಪತ್ತೊಂದನ್ನು ತಡೆಗಟ್ಟಿದೆ.

ಕೋಸ್ಟ್ ಗಾರ್ಡ್
Srinivas Rao BV
Updated On : 2 Aug 2023, 5:19 pm

ನವದೆಹಲಿ: ಕ್ಷಿಪ್ರಗತಿಯ ಕಾರ್ಯಾಚರಣೆ ಕೈಗೊಂಡ ಭಾರತೀಯ ಕೋಸ್ಟ್ ಗಾರ್ಡ್, ಸಂಭಾವ್ಯ ವಿಪತ್ತೊಂದನ್ನು ತಡೆಗಟ್ಟಿದೆ.
 
ಎನ್ಐಒ ಗೆ ಸೇರಿದ ಹಡಗೊಂದು ಇಂಜಿನ್ ವೈಫಲ್ಯ ಎದುರಿಸಿ, ಕಾರವಾರದ ಸಮೀಪ ಅಪಾಯಕಾರಿ ಪರಿಸ್ಥಿತಿಯಲ್ಲಿತ್ತು. ಅದನ್ನು ಕೋಸ್ಟ್ ಗಾರ್ಡ್ ಸುರಕ್ಷಿತವಾಗಿ ದಡಕ್ಕೆ ಎಳೆದು ತಂದಿದೆ. 

ಈ ಹಡಗಿನಲ್ಲಿ 8 ವಿಜ್ಞಾನಿಗಳು ಹಾಗೂ 36 ಸಿಬ್ಬಂದಿಗಳಿದ್ದರು. ಆರ್ ವಿ ಸಿಂಧು ಸಾಧನ ಹಡಗನ್ನು 03 ನಾಟ್ಸ್ ನ ವೇಗದಲ್ಲಿ ಎಳೆದು ತಂದು ದಡ ತಲುಪಿಸಲಾಗಿದೆ. ತೊಂದರೆಯ ಸಿಗ್ನಲ್ ಲಭ್ಯವಾದಾಗ ಹಡಗು ದಡದಿಂದ 20 ನಾಟಿಕಲ್ ಮೈಲುಗಳಷ್ಟು ದೂರವಿತ್ತು ಎಂದು ಐಸಿಜಿ ಹೇಳಿದೆ.

ಕರೆಯನ್ನು ಸ್ವೀಕರಿಸಿದ ನಂತರ, ಕೋಸ್ಟ್ ಗಾರ್ಡ್ ಹೆಚ್ಚಿನ ಆದ್ಯತೆಯ ರಕ್ಷಣಾ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಿತು, ಆ ಪ್ರದೇಶಕ್ಕೆ ನುರಿತ ತಂಡದೊಂದಿಗೆ ಹೆಚ್ಚು ಸುಧಾರಿತ ಹಡಗನ್ನು ರವಾನಿಸಿತು. ಐಸಿಜಿ ನೀಡಿರುವ ಮಾಹಿತಿಯ ಪ್ರಕಾರ, ಹಡಗಿನಲ್ಲಿ ಮೌಲ್ಯಯುತವಾದ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಡೇಟಾ ಇದ್ದಿದ್ದರಿಂದ  ಪರಿಸ್ಥಿತಿ ಗಂಭೀರವಾಗಿತ್ತು. ಅದಷ್ಟೇ ಅಲ್ಲದೇ “ಇದಲ್ಲದೆ, ಪರಿಸರ ಸೂಕ್ಷ್ಮ ಕಾರವಾರ ಕರಾವಳಿ ತೀರಕ್ಕೆ ಹಡಗು ಸಾಮಿಪ್ಯದಲ್ಲಿದ್ದ ಪರಿಣಾಮ, ತೈಲ ಸೋರಿಕೆಯ ಅಪಾಯವೂ ಇತ್ತೆಂದು ಐಸಿಜಿ ಹೇಳಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments