ಸಾಂದರ್ಭಿಕ ಚಿತ್ರ 
ದೇಶ

ಭಾರತದ ರಸಗೊಬ್ಬರ ಸಬ್ಸಿಡಿ ಬಿಲ್ 2.55 ಲಕ್ಷ ಕೋಟಿ ರೂ. ಆಗಿದ್ದು ಪರಿಷ್ಕೃತ ಅಂದಾಜನ್ನು ಮೀರಿದೆ!

ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಕೇಂದ್ರ ಬಜೆಟ್‌ನಲ್ಲಿನ ಅತಿದೊಡ್ಡ ಸಬ್ಸಿಡಿಗಳಲ್ಲಿ ಒಂದಾಗಿದ್ದು ಕಳೆದ ಹಣಕಾಸು ವರ್ಷದಲ್ಲಿ ಶೇಕಡ 62ರಷ್ಟು ಏರಿಕೆಯೊಂದಿಗೆ 2.55 ಲಕ್ಷ ಕೋಟಿ ರೂಪಾಯಿಗೆ ಏರಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಇಂದು ಬಹಿರಂಗಪಡಿಸಿದೆ.

ನವದೆಹಲಿ: ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಕೇಂದ್ರ ಬಜೆಟ್‌ನಲ್ಲಿನ ಅತಿದೊಡ್ಡ ಸಬ್ಸಿಡಿಗಳಲ್ಲಿ ಒಂದಾಗಿದ್ದು ಕಳೆದ ಹಣಕಾಸು ವರ್ಷದಲ್ಲಿ ಶೇಕಡ 62ರಷ್ಟು ಏರಿಕೆಯೊಂದಿಗೆ 2.55 ಲಕ್ಷ ಕೋಟಿ ರೂಪಾಯಿಗೆ ಏರಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಇಂದು ಬಹಿರಂಗಪಡಿಸಿದೆ.

ಇದು ಇತ್ತೀಚಿನ ವರ್ಷಗಳಲ್ಲಿ ರಸಗೊಬ್ಬರ ಸಬ್ಸಿಡಿ ಬಿಲ್‌ನಲ್ಲಿ ತೀವ್ರ ಹೆಚ್ಚಳವನ್ನು ಸೂಚಿಸುತ್ತಿದ್ದು ರಷ್ಯಾ-ಉಕ್ರೇನ್ ಯುದ್ಧದಿಂದ ಇದು ಉಂಟಾಗಿದೆ. ಭಾರತವು ವಿದೇಶದಿಂದ ಪ್ರಮುಖ ರಸಗೊಬ್ಬರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದ್ದು ಉಕ್ರೇನ್ ಮತ್ತು ರಷ್ಯಾ ಜಗತ್ತಿಗೆ ರಸಗೊಬ್ಬರಗಳ ಪ್ರಮುಖ ಪೂರೈಕೆದಾರರಾಗಿದ್ದಾರೆ.

ಕಳೆದ ವರ್ಷ ಸಬ್ಸಿಡಿ ಬಿಲ್ 1.58 ಲಕ್ಷ ಕೋಟಿ ಆಗಿತ್ತು. ಇನ್ನು 2022-23ರ ಹಣಕಾಸು ವರ್ಷದಲ್ಲಿ 2.25 ಲಕ್ಷ ಕೋಟಿಗಿಂತ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅದನ್ನೂ ಮೀರಿ 2.55 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರೊಂದಿಗೆ ರಸಗೊಬ್ಬರ ಸಬ್ಸಿಡಿಯು ಆಹಾರ ಸಬ್ಸಿಡಿ ಬಿಲ್‌ಗೆ ಹೋಲಿಸಬಹುದಾದ ಗಾತ್ರವನ್ನು ತಲುಪಿದೆ. ಕಳೆದ ಹಣಕಾಸು ವರ್ಷದ ಆಹಾರ ಸಬ್ಸಿಡಿ ಬಿಲ್ 2.87 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನು ಪೆಟ್ರೋಲಿಯಂ ಸಬ್ಸಿಡಿ ಬಿಲ್ ಸುಮಾರು 10,000 ಕೋಟಿ ಎಂದು ಅಂದಾಜಿಸಲಾಗಿದೆ.

ಎಲ್‌ಪಿಜಿ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನು ಸರ್ಕಾರ ಕಡಿತಗೊಳಿಸುತ್ತಿದೆ. ಆದರೆ ರಸಗೊಬ್ಬರ ಸಬ್ಸಿಡಿಯನ್ನು ಮುಟ್ಟಿಲ್ಲ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸರ್ಕಾರವು ಹಿಂದಿನ ವರ್ಷಕ್ಕಿಂತ ಒಟ್ಟು ಸಬ್ಸಿಡಿ ಬಜೆಟ್ ಅನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿದೆ. ಮಾರ್ಚ್‌ಗೆ ಕೊನೆಗೊಂಡ ವರ್ಷದ ಒಟ್ಟು ಸಬ್ಸಿಡಿ ಬಜೆಟ್ ಅನ್ನು ಕೇವಲ 3.55 ಲಕ್ಷ ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಆದರೆ ಈಗ ಈ ಸಂಖ್ಯೆಯು ಸುಮಾರು 5.5-6.0 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ.

ಭಾರತದ ರಸಗೊಬ್ಬರ ಸಬ್ಸಿಡಿ ಆಡಳಿತದ ಅಡಿಯಲ್ಲಿ, ಬೇವು-ಲೇಪಿತ ಮತ್ತು ತೆರಿಗೆ ವೆಚ್ಚಗಳನ್ನು ಹೊರತುಪಡಿಸಿ, 45 ಕೆಜಿ ಚೀಲಕ್ಕೆ 242 ರೂಪಾಯಿಯನ್ನು ಶಾಸನಬದ್ಧವಾಗಿ ಸೂಚಿಸಲಾದ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಯೂರಿಯಾವನ್ನು ರೈತರಿಗೆ ನೀಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT