ಪಿಎಂ ನರೇಂದ್ರ ಮೋದಿ 
ದೇಶ

ಪ್ರತಿಪಕ್ಷಗಳು ತಾವು ಒಳ್ಳೆಯ ಕೆಲಸ ಮಾಡುವುದಿಲ್ಲ, ಬೇರೆಯವರನ್ನು ಮಾಡಲು ಬಿಡುವುದೂ ಇಲ್ಲ,ನಕಾರಾತ್ಮಕ ರಾಜಕಾರಣ ಮಾಡುತ್ತಿವೆ: ಪ್ರಧಾನಿ ಮೋದಿ ವಾಗ್ದಾಳಿ

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಹೊಸದಾಗಿ ರೂಪುಗೊಂಡ ವಿರೋಧ ಪಕ್ಷವಾದ 'ಇಂಡಿಯಾ' ವಿರುದ್ಧ ಮತ್ತೊಮ್ಮೆ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ "ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ್ಯವನ್ನು ಪಡೆಯುವತ್ತ ಭಾರತದ ಮೆಟ್ಟಿಲುಗಳಲ್ಲಿ ಹೊಸ ಶಕ್ತಿಯನ್ನು ತುಂಬಿದೆ.

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಹೊಸದಾಗಿ ರೂಪುಗೊಂಡ ವಿರೋಧ ಪಕ್ಷವಾದ 'ಇಂಡಿಯಾ' ವಿರುದ್ಧ ಮತ್ತೊಮ್ಮೆ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ "ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ್ಯವನ್ನು ಪಡೆಯುವತ್ತ ಭಾರತದ ಮೆಟ್ಟಿಲುಗಳಲ್ಲಿ ಹೊಸ ಶಕ್ತಿಯನ್ನು ತುಂಬಿದೆ. ಇದರಿಂದ ಪ್ರೇರಿತರಾಗಿ ಇಂದು ಇಡೀ ದೇಶವು ಎಲ್ಲಾ ಕೆಡುಕುಗಳನ್ನು ತೊಲಗಿಸಲು ಕ್ವಿಟ್ ಇಂಡಿಯಾ ಎಂದು ಹೇಳುತ್ತಿದೆ.

ದೇಶದಲ್ಲಿ 508 ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡಿದ ನಂತರ ಪ್ರಧಾನಿ ಮೋದಿಯವರು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.  ಭಾರತ ಬಿಟ್ಟು ತೊಲಗಿ ಚಳುವಳಿಯು ಆಗಸ್ಟ್ 9, 1942 ರಂದು ಪ್ರಾರಂಭವಾಯಿತು. ಭಾರತ ಬಿಟ್ಟು ತೊಲಗಿ ಚಳವಳಿಯು ಇಂದು ಭಾರತಕ್ಕೆ ಸ್ವಾತಂತ್ರ್ಯ ಮತ್ತು ದೇಶಕ್ಕೆ ಹೊಸ ಶಕ್ತಿಯನ್ನು ಬೆಳೆಸಿತು, ದೇಶದಿಂದ ಇಂದು ಎಲ್ಲಾ ದುಷ್ಟಶಕ್ತಿಗಳನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಇಂದು ಎಲ್ಲೆಡೆ ಒಂದೇ ಧ್ವನಿ ಕೇಳಿಬರುತ್ತಿದೆ, ಭ್ರಷ್ಟಾಚಾರ, ಭಾರತ ಬಿಟ್ಟು ತೊಲಗಿ. ರಾಜವಂಶ, ಭಾರತ ಬಿಟ್ಟು ತೊಲಗಿ. ತುಷ್ಠೀಕರಣ ರಾಜಕಾರಣ, ಭಾರತ ಬಿಟ್ಟು ತೊಲಗಿ" ಎಂಬುದು. ಪ್ರತಿಪಕ್ಷಗಳು ತಾವು ಒಳ್ಳೆಯ ಕೆಲಸ ಮಾಡುವುದೂ ಇಲ್ಲ, ಬೇರೆಯವರನ್ನು ಮಾಡಲು ಬಿಡುವುದೂ ಇಲ್ಲ ಎಂದು ಆರೋಪಿಸಿದರು. 

ಇದನ್ನೂ ಓದಿ: ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 13 ನಿಲ್ದಾಣಗಳ ಪುನರಾಭಿವೃದ್ಧಿ: ಯಾವ ನಿಲ್ದಾಣಗಳವು?

ದೇಶದಲ್ಲಿ ಆಧುನಿಕ ಸಂಸತ್ ಭವನವನ್ನು ನಿರ್ಮಿಸಲಾಗಿದೆ. ಸಂಸತ್ತು ದೇಶದ ಪ್ರಜಾಪ್ರಭುತ್ವದ ಸಂಕೇತವಾಗಿದೆ. ಇದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಪ್ರಾತಿನಿಧ್ಯವಿದೆ. ಆದರೆ ಪ್ರತಿಪಕ್ಷದ ಒಂದು ಬಣವು ಹೊಸ ಸಂಸತ್ತಿನ ಕಟ್ಟಡ ನಿರ್ಮಾಣಕ್ಕೂ ವಿರೋಧಿಸಿತು ಎಂದರು.

70 ವರ್ಷಗಳಿಂದ ಅವರು ದೇಶದ ವೀರ ಹುತಾತ್ಮ ಯೋಧರಿಗೆ ಯುದ್ಧ ಸ್ಮಾರಕವನ್ನು ಸಹ ನಿರ್ಮಿಸಲಿಲ್ಲ. ನಾವು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಿಸಿದಾಗ, ಅದನ್ನು ಸಾರ್ವಜನಿಕವಾಗಿ ಟೀಕಿಸಲು ಅವರಿಗೆ ನಾಚಿಕೆಯಾಗಲಿಲ್ಲ. ನಕಾರಾತ್ಮಕ ರಾಜಕೀಯ ಚಟುವಟಿಕೆಗಳನ್ನು ಮೆಟ್ಟಿನಿಂತು ನಾವು ಮುಂದೆ ಹೋಗುತ್ತಿದ್ದೇವೆ. ಸಕಾರಾತ್ಮಕ ರಾಜಕೀಯದ ಮಾರ್ಗವು ಒಂದು ಧ್ಯೇಯವಾಗಿದೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT