ದೇಶ

ಮುಂಬೈ: ಉದ್ಧವ್ ಠಾಕ್ರೆ ನಿವಾಸಕ್ಕೆ ನುಗ್ಗಿದ 4 ಅಡಿ ಉದ್ದದ ವಿಷಪೂರಿತ ಹಾವು!

Shilpa D

ಮಹಾರಾಷ್ಟ್ರ: ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಂಬೈ ನಿವಾಸದಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ.

ಬಾಂದ್ರಾದ ಕಲಾ ನಗರದಲ್ಲಿರುವ ಠಾಕ್ರೆ ಅವರ ಮಾತೋಶ್ರೀ ನಿವಾಸದ ಆವರಣದಲ್ಲಿ ಹಾವು ಕಾಣಿಸಿಕೊಂಡಿದೆ . ಭಾನುವಾರ ಮಧ್ಯಾಹ್ನ 1.30 ರ ಸುಮಾರಿಗೆ ಹಾವು ಕಂಡುಬಂದ ಹಿನ್ನೆಲೆಯಲ್ಲಿ ಉರಗ ರಕ್ಷಕ ಅತುಲ್ ಕಾಂಬ್ಳೆ ಅವರಿಗೆ ಕರೆ ಮಾಡಲಾಗಿದೆ.

ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅವರು ತಮ್ಮ ತಂಡದೊಂದಿಗೆ ಠಾಕ್ರೆ ನಿವಾಸಕ್ಕೆ ಬಂದು ಮನೆಯೊಳಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು. ವೀಡಿಯೊದಲ್ಲಿ, ಉದ್ಧವ್ ಠಾಕ್ರೆ ಅವರ ಕಿರಿಯ ಮಗ ತೇಜಸ್ ಠಾಕ್ರೆ ಕೂಡಾ ಸ್ಥಳದಲ್ಲಿ ಇದ್ದಿದ್ದಾಗಿ ತಿಳಿದು ಬಂದಿದೆ.

ಹಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿದ ವೇಳೆ ತಂದೆ ಮಗ ಇಬ್ಬರೂ ಸ್ಥಳದಲ್ಲಿಯೇ ಇದ್ದು ರಕ್ಷಣಾ ಕಾರ್ಯಾಚರಣೆ ವೀಕ್ಷಣೆ ಮಾಡಿದ್ದಾರೆ. ವನ್ಯಜೀವಿ ಸಂಶೋಧಕರಾಗಿರುವ ತೇಜಸ್ ಠಾಕ್ರೆ ಅವರು ಹಾವಿನ ರಕ್ಷಣೆಯ ಪ್ರಯತ್ನದ ಸಮಯದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕೂಡಾ ಕಂಡುಬಂದಿದೆ.

SCROLL FOR NEXT