ದೇಶ

ಮಧ್ಯಪ್ರದೇಶ: ಲಿಂಗ ಪರಿವರ್ತನೆ ಪ್ರಕ್ರಿಯೆಗೆ ಒಳಗಾಗಲು ಮಹಿಳಾ ಪೊಲೀಸ್​ ಕಾನ್ಸ್​​ಟೇಬಲ್ ಗೆ ಅನುಮತಿ!

Nagaraja AB

ರತ್ಲಾಮ್:ಮಧ್ಯಪ್ರದೇಶದ ಮಹಿಳಾ ಪೊಲೀಸ್  ಕಾನ್‌ಸ್ಟೆಬಲ್‌ಗೆ ಲಿಂಗ ಪರಿವರ್ತನೆ ಪ್ರಕ್ರಿಯೆಗೆ ಒಳಗಾಗಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ರತ್ಲಾಮ್ ಜಿಲ್ಲೆಯಲ್ಲಿ ನೇಮಕಗೊಂಡಿರುವ ದೀಪಿಕಾ ಕೊಠಾರಿ ಲಿಂಗ ಬದಲಾವಣೆಗೆ ಅನುಮತಿ ಪಡೆದ ರಾಜ್ಯದ ಎರಡನೇ ಮಹಿಳಾ ಕಾನ್‌ಸ್ಟೆಬಲ್ ಆಗಿದ್ದಾರೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜೇಶ್ ರಾಜೋರಾ ಹೇಳಿದ್ದಾರೆ.

ಕೊಠಾರಿ ಅವರಿಗೆ 'ಲಿಂಗ ಗುರುತಿನ ಯಾತನೆ ಇದ್ದು, ವೈದ್ಯಕೀಯ ವರದಿಗಳ ಆಧಾರದ ಮೇಲೆ ಲಿಂಗ ಬದಲಾವಣೆಗೆ ಒಳಗಾಗಲು ಅನುಮತಿಸಲಾಗಿದೆ ಎಂದು ರಾಜ್ಯ ಗೃಹ ಇಲಾಖೆ ಸೋಮವಾರ ಹೊರಡಿಸಿದ ಆದೇಶದಲ್ಲಿ ಹೇಳಿದೆ. ಸರ್ಕಾರಿ ನೌಕರರಿಗೆ ಲಿಂಗ ಬದಲಾವಣೆಗೆ ಅನುಮತಿಸಲು ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿದೆ. ಲಿಂಗ ಬದಲಾವಣೆಯ ನಂತರ, ಕಾನ್‌ಸ್ಟೆಬಲ್ ಮಹಿಳಾ ಉದ್ಯೋಗಿಗಳಿಗೆ ಮೀಸಲಾದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2021 ರಲ್ಲಿ ಆರ್ತಿ ಯಾದವ್ ಎಂಬ ಇನ್ನೊಬ್ಬ ಮಹಿಳಾ ಕಾನ್‌ಸ್ಟೆಬಲ್ ಇದೇ ರೀತಿಯ ಅನುಮತಿಯನ್ನು ಪಡೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT