ದೇಶ

ಶಿಕ್ಷಣ ಪ್ರಗತಿಯ ದಾರಿದೀಪವಾಗಬೇಕು, ರಾಜಕೀಯ ಕೈಗೊಂಬೆಯಾಗಬಾರದು: ರಾಜ್ಯದಲ್ಲಿ ಎನ್‌ಇಪಿ ರದ್ದತಿಗೆ ಕೇಂದ್ರ ಕಿಡಿ

Lingaraj Badiger

ನವದೆಹಲಿ: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರ "ರಾಜಕೀಯ ಪ್ರೇರಿತ" ಎಂದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕು. ರಾಜಕೀಯ ಕೈಗೊಂಬೆಯಾಗಬಾರದು ಎಂದು ಗುರುವಾರ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರದ್ದುಗೊಳಿಸುವ ಕರ್ನಾಟಕ ಮುಖ್ಯಮಂತ್ರಿ ನಿರ್ಧಾರ ರಾಜಕೀಯ ಪ್ರೇರಿತ ಮತ್ತು ಇದರಿಂದ ತೀವ್ರ ನಿರಾಶೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ನಮ್ಮ ಶಿಕ್ಷಣ ವ್ಯವಸ್ಥೆಗೆ ವಿಕಸನ ಬೇಕು. NEP ಹಲವು ವರ್ಷಗಳ ಸಮಾಲೋಚನೆಗಳ ಫಲಿತಾಂಶವಾಗಿದ್ದು, ಇದು ಎಲ್ಲರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನ್ ತಿಳಿಸಿದ್ದಾರೆ.

ಈ ನಿರ್ಧಾರವು ಕಾಂಗ್ರೆಸ್ ನ ಸುಧಾರಣೆ-ವಿರೋಧಿ, ಭಾರತೀಯ ಭಾಷಾ ವಿರೋಧಿ ಮತ್ತು ಕರ್ನಾಟಕ ವಿರೋಧಿ ನೀತಿಯನ್ನು ಬಹಿರಂಗಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಕ್ಷುಲ್ಲಕ ರಾಜಕೀಯ ಮಾಡುವುದನ್ನು ನಿಲ್ಲಿಸೋಣ! ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿ ಧರ್ಮೇಂದ್ರ ಪ್ರಧಾನ್ ಅವರು ಎಕ್ಸ್(ಟ್ವೀಟ್) ಮಾಡಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎನ್‌ಇಪಿಯನ್ನು ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ಎನ್‌ಇಪಿಯನ್ನು ರದ್ದುಪಡಿಸುವ ಮೂಲಕ ತಮ್ಮ ಸರ್ಕಾರವು ಸಂವಿಧಾನದ ಪ್ರಕಾರ ಶಿಕ್ಷಣ ನೀಡಲು ಪ್ರಯತ್ನಿಸುತ್ತದೆ ಎಂದು ಸಿಎಂ ತಿಳಿಸಿದ್ದರು.

SCROLL FOR NEXT