ರಾಜ್ಯಸಭೆ 
ದೇಶ

ರಾಜ್ಯಸಭೆಯ ಶೇ.12 ರಷ್ಟು ಸಂಸದರು ಕೋಟ್ಯಾಧಿಪತಿಗಳು, 75 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ

ರಾಜ್ಯಸಭೆಯ ಶೇ.12 ರಷ್ಟು ಹಾಲಿ ಸಂಸದರು ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಅತಿ ಹೆಚ್ಚು ಶ್ರೀಮಂತ ರಾಜ್ಯಸಭಾ ಸದಸ್ಯರನ್ನು ಹೊಂದಿವೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ವರದಿ...

ನವದೆಹಲಿ: ರಾಜ್ಯಸಭೆಯ ಶೇ.12 ರಷ್ಟು ಹಾಲಿ ಸಂಸದರು ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಅತಿ ಹೆಚ್ಚು ಶ್ರೀಮಂತ ರಾಜ್ಯಸಭಾ ಸದಸ್ಯರನ್ನು ಹೊಂದಿವೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ವರದಿ ಮಾಡಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಒಟ್ಟು 233 ರಾಜ್ಯಸಭಾ ಸಂಸದರ ಪೈಕಿ 225 ಸದಸ್ಯರ ಅಪರಾಧ, ಹಣಕಾಸು ಮತ್ತು ಇತರ ವಿವರಗಳನ್ನು ವಿಶ್ಲೇಷಿಸಿದೆ.

ಪ್ರಸ್ತುತ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದೆ.

ವರದಿಯ ಪ್ರಕಾರ, ಆಂಧ್ರಪ್ರದೇಶದ 11 ಸಂಸದರ ಪೈಕಿ ಐವರು(ಶೇ. 45), ತೆಲಂಗಾಣದ ಏಳು ಸಂಸದರಲ್ಲಿ ಮೂವರು(ಶೇ. 43), ಮಹಾರಾಷ್ಟ್ರದ 19 ಸಂಸದರ ಪೈಕಿ ಮೂವರು(ಶೇ. 16), ದೆಹಲಿಯ ಮೂವರು ಸಂಸದರಲ್ಲಿ ಒಬ್ಬರು (ಶೇ. 33), ಪಂಜಾಬ್‌ನ ಏಳು ಸಂಸದರಲ್ಲಿ ಇಬ್ಬರು(ಶೇ 29), ಹರಿಯಾಣದ ಐದು ಸಂಸದರಲ್ಲಿ ಒಬ್ಬರು(ಶೇ 20) ಮತ್ತು ಮಧ್ಯಪ್ರದೇಶದ 11 ಸಂಸದರಲ್ಲಿ ಇಬ್ಬರು(ಶೇ 18) 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ತೆಲಂಗಾಣದಿಂದ ಏಳು ಸಂಸದರ ಒಟ್ಟು ಆಸ್ತಿ ಮೌಲ್ಯ 5,596 ಕೋಟಿ ರೂ. ಆಗಿದ್ದು, ಆಂಧ್ರಪ್ರದೇಶದ 11 ಸಂಸದರ ಒಟ್ಟು ಆಸ್ತಿ 3,823 ಕೋಟಿ ರೂ. ಮತ್ತು ಉತ್ತರ ಪ್ರದೇಶದ 30 ಸಂಸದರ ಒಟ್ಟು ಆಸ್ತಿ ಮೌಲ್ಯ 1,941 ಕೋಟಿ ರೂ. ಎಂದು ವರದಿ ವಿಶ್ಲೇಷಿಸಿದೆ.

225 ರಾಜ್ಯಸಭೆಯ ಹಾಲಿ ಸಂಸದರ ಪೈಕಿ 75 ಸದಸ್ಯರು(ಶೇ.33) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಸುಮಾರು 41 (ಶೇ. 18) ರಾಜ್ಯಸಭೆಯ ಹಾಲಿ ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ ಮತ್ತು ಇಬ್ಬರು ಸದಸ್ಯರು ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT