ಸಾಂದರ್ಭಿಕ ಚಿತ್ರ 
ದೇಶ

ಸ್ವಾಗತ, ಗೆಳೆಯ! ಚಂದ್ರಯಾನ-2 ಆರ್ಬಿಟರ್ ಜೊತೆ ಚಂದ್ರಯಾನ-3 ಸಂಪರ್ಕ ಯಶಸ್ವಿ!

ಭಾರತದ ಮಹತ್ವಾಕಾಂಕ್ಷಿಯ ಯೋಜನೆ ಚಂದ್ರಯಾನ 3 ನಿರಂತರವಾಗಿ ತನ್ನ ಗುರಿಯತ್ತ ಸಾಗುತ್ತಿದೆ. ಈಗ ಇಸ್ರೋ ಚಂದ್ರಯಾನ-3 ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ...

ಭಾರತದ ಮಹತ್ವಾಕಾಂಕ್ಷಿಯ ಯೋಜನೆ ಚಂದ್ರಯಾನ 3 ನಿರಂತರವಾಗಿ ತನ್ನ ಗುರಿಯತ್ತ ಸಾಗುತ್ತಿದೆ. ಈಗ ಇಸ್ರೋ ಚಂದ್ರಯಾನ-3 ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. 

ಚಂದ್ರಯಾನ-2ನ ಆರ್ಬಿಟರ್ ವಾಹನ-ಚಂದ್ರಯಾನ 3ನ್ನು ಸ್ವಾಗತಿಸಿದೆ. ಇಬ್ಬರ ನಡುವೆ ದ್ವಿಮುಖ ಸಂವಹನ ನಡೆದಿದೆ. ಇಸ್ರೋ ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಇತ್ತೀಚಿನ ಹೊಸ ಅಪ್ಡೇಟ್ ಇದಾಗಿದೆ.

ಭಾರತದ ಬಾಹ್ಯಾಕಾಶ ನೌಕೆ ಚಂದ್ರಯಾನ-3 ಚಂದ್ರನ ಮೇಲ್ಮೈ ಸ್ಪರ್ಶಿಸಲು ದಿನಗಣನೆ ಶುರುವಾಗಿದೆ. ಇಸ್ರೋ ವಿಜ್ಞಾನಿಗಳು ಯಾವುದೇ ತಪ್ಪು ಸಂಭವಿಸಿದರೂ, ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುತ್ತದೆ ಎಂದು ಸಂಪೂರ್ಣವಾಗಿ ಖಚಿತವಾಗಿದೆ. ಮೊದಲು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಮತ್ತು ನಂತರ ಚಂದ್ರಯಾನ-2 ಮತ್ತು 3 ಉಡಾವಣೆ ಸಂದರ್ಭದಲ್ಲಿ ಇಸ್ರೋ ಸಹೋದ್ಯೋಗಿ, ಏರೋಸ್ಪೇಸ್ ವಿಜ್ಞಾನಿ ಪ್ರೊಫೆಸರ್ ರಾಧಾಕಾಂತ್ ಪಾಧಿ ಅವರು ಚಂದ್ರಯಾನ-2 ರ ವೈಫಲ್ಯದ ನಂತರ, ಇಸ್ರೋ ಸಾಕಷ್ಟು ಸುಧಾರಣೆಗಳನ್ನು ಮಾಡಿ ಚಂದ್ರಯಾನ-3 ಅನ್ನು ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

2023ರ ಆಗಸ್ಟ್ 21ರಂದು ಚಂದ್ರಯಾನ-3 ಚಂದ್ರನ ಕಡೆಗೆ ಚಲಿಸುವ ಮೂಲಕ ಚಂದ್ರಯಾನ-2ರ ಆರ್ಬಿಟರ್‌ನೊಂದಿಗೆ ಸಂಪರ್ಕವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಇಬ್ಬರ ನಡುವೆ ದ್ವಿಮುಖ ಸಂವಹನ ನಡೆದಿದೆ. ಚಂದ್ರಯಾನ-2 ರ ಆರ್ಬಿಟರ್ ಚಂದ್ರಯಾನ-3 ಅನ್ನು ಚಂದ್ರನ ಕಕ್ಷೆಯಲ್ಲಿ ಸ್ವಾಗತಿಸಿದೆ. ಭಾನುವಾರ ಬೆಳಿಗ್ಗೆಯವರೆಗೆ ಚಂದ್ರನ ಮೇಲ್ಮೈಯಿಂದ ಚಂದ್ರಯಾನ-3ರ ಅಂತರವು ಕೇವಲ 25 ಕಿಲೋಮೀಟರ್‌ಗಳಷ್ಟಿತ್ತು. ಅದು ಈಗ ಸಾಕಷ್ಟು ಕಡಿಮೆಯಾಗಿದೆ. ಚಂದ್ರಯಾನ-3 ಚಂದ್ರನ ಸುತ್ತ ಪ್ರದಕ್ಷಿಣೆ ಹಾಕುತ್ತಲೇ ಅದರ ಸಮೀಪ ಬರುತ್ತಿದೆ.

ಲ್ಯಾಂಡಿಂಗ್ ಅಪ್ಡೇಟ್
ಆಗಸ್ಟ್ 21ರಂದು ಚಂದ್ರಯಾನ-3 ಲ್ಯಾಂಡಿಂಗ್ ಕುರಿತು ಇಸ್ರೋ ಇತ್ತೀಚಿನ ಅಪ್ಡೇಟ್ ಬಿಡುಗಡೆ ಮಾಡಿದೆ. ಲ್ಯಾಂಡಿಂಗ್ ಸಮಯವನ್ನು ಆಗಸ್ಟ್ 23ರಂದು ಸಂಜೆ 6.04ಕ್ಕೆ ಇರಿಸಲಾಗಿದೆ ಎಂದು ಹೇಳಿದರು. ಈ ಸಮಯದಲ್ಲಿ, ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ಗಾಗಿ ಪ್ರಯತ್ನಿಸಲಾಗುತ್ತದೆ. ಸ್ಥಳೀಯ ಕಾಲಮಾನ ಸಂಜೆ 5.20ಕ್ಕೆ ಲ್ಯಾಂಡಿಂಗ್ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!