ಐಶ್ವರ್ಯಾ ರೈ 
ದೇಶ

ಪ್ರತಿ ನಿತ್ಯ ಮೀನು ತಿಂದರೆ ನಿಮ್ಮ ಕಣ್ಣುಗಳು ಐಶ್ವರ್ಯಾ ರೈ ತರ ಆಗುತ್ತೆ: ಸಚಿವರ ಹೇಳಿಕೆ ವೈರಲ್

ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಸೌಂದರ್ಯಕ್ಕೆ ಕಾರಣವೇ ಮೀನು ಸೇವನೆ ಎಂದಿರುವ ಸಚಿವರ ಹೇಳಿಕೆ ವಿವಾದದ ಸ್ವರೂಪವನ್ನೂ ಪಡೆದಿದೆ.

ಮುಂಬೈ: ಮಹಾರಾಷ್ಟ್ರ ದೋಸ್ತಿ ಸರ್ಕಾರದ ಬಿಜೆಪಿ ಸಚಿವರೊಬ್ಬರು ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳ ಟೀಕಾ ಪ್ರಹಾರಕ್ಕೆ ಆಹಾರವಾಗಿದೆ. ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಸೌಂದರ್ಯಕ್ಕೆ ಕಾರಣವೇ ಮೀನು ಸೇವನೆ ಎಂದಿರುವ ಸಚಿವರ ಹೇಳಿಕೆ ವಿವಾದದ ಸ್ವರೂಪವನ್ನೂ ಪಡೆದಿದೆ.

ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ಸಾರ್ವಜನಿಕ ಸಮಾರಂಭವೊಂದರಲ್ಲಿ ರಾಜ್ಯ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗಾವಿತ್ ಅವರು ನೀಡಿದ ಹೇಳಿಕೆಗಳ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ನಟಿ ಐಶ್ವರ್ಯಾ ರೈ ಅವರಂತೆ ಕಣ್ಣುಗಳನ್ನು ಹೊಂದಲು ನಿತ್ಯ ಮೀನಿನ ಸೇವನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ, ಪ್ರತಿನಿತ್ಯ ಮೀನುಗಳನ್ನು ತಿನ್ನುವ ಜನರು ನಯವಾದ ಚರ್ಮವನ್ನು ಹೊಂದಿರುತ್ತಾರೆ, ಅವರ ಕಣ್ಣುಗಳು ಹೊಳೆಯುತ್ತವೆ. ಮೀನಿನಲ್ಲಿ ಕೆಲವು ಎಣ್ಣೆಗಳಿವೆ, ಅದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ. ಯಾರಾದರೂ ನಿಮ್ಮನ್ನು ನೋಡಿದರೆ ಅವರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.

ನಿಮಗೆ ಐಶ್ವರ್ಯ ರೈ ಅವರ ಬಗ್ಗೆ ಗೊತ್ತಾ ಎಂದು ಸಭಿಕರನ್ನು ಪ್ರಶ್ನಿಸುವ ಸಚಿವರು, ಐಶ್ವರ್ಯ ರೈ ಅವರ ಹುಟ್ಟೂರು ಮಂಗಳೂರು. ಐಶ್ವರ್ಯ ರೈ ಅವರು ಮಂಗಳೂರಿನ ಕರಾವಳಿ ನಿವಾಸಿ. ಅವರು ಪ್ರತಿ ದಿನ ಮೀನು ಸೇವನೆ ಮಾಡುತ್ತಾರೆ. ನೀವು ಅವರ ಕಣ್ಣುಗಳನ್ನು ನೋಡಿದ್ದೀರಾ? ಅವರಂತೆಯೇ ನಿಮ್ಮ ಕಣ್ಣುಗಳೂ ಕೂಡಾ ಹೊಳೆಯುವಂತೆ ಮಾಡಬಹುದು. ಮೀನುಗಳಲ್ಲಿ ಹಲವು ತೈಲಗಳು ಇರುತ್ತವೆ. ಈ ತೈಲ ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ ಎಂದು ಸಚಿವರು ಹೇಳಿದ್ದಾರೆ. ವಿಜಯ್‌ಕುಮಾರ್ ಗಾವಿತ್ ಪುತ್ರಿ ಹೀನಾ ಗಾವಿತ್ ಬಿಜೆಪಿಯ ಲೋಕಸಭಾ ಸದಸ್ಯರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel