ದೇಶ

ಭಾರತೀಯ ಸಂಸ್ಥೆಗಳನ್ನು ಬಯಲು ಮಾಡಲು ಜಾರ್ಜ್ ಸೊರೊಸ್ ಬೆಂಬಲಿತ ಸಮೂಹ ಯೋಜನೆ! 

Srinivas Rao BV

ನವದೆಹಲಿ: ಅದಾನಿ ಸಮೂಹದ ಬಗ್ಗೆ ಅಮೇರಿಕಾ ಶಾರ್ಟ್ ಸೆಲ್ಲರ್ ವರದಿ ಪ್ರಕಟಿಸಿದ ಕೆಲವೇ ತಿಂಗಳಲ್ಲಿ,  ಜಾರ್ಜ್ ಸೊರೊಸ್  ಹಾಗೂ ರಾಕೆಟ್ ಫೆಲ್ಲರ್ ಬ್ರದರ್ಸ್ ಫಂಡ್ ಅನುದಾನಿತ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್ ಪಿ) ಸಂಸ್ಥೆ ಭಾರತದ ನಿರ್ದಿಷ್ಟ ಕಾರ್ಪೊರೇಟ್ ಹೌಸ್ ಗಳನ್ನು ಬಯಲು ಮಾಡಲು ಯೋಜನೆ ರೂಪಿಸುತ್ತಿದೆ. 

ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೇರಿಕಾ, ಯುರೋಪ್ ನಾದ್ಯಂತ ಹರಡಿಕೊಂಡಿರುವ 24 ಲಾಭರಹಿತ ತನಿಖಾ ಕೇಂದ್ರಗಳಿಂದ ರಚನೆಯಾಗಿರುವ ತನಿಖಾ ವರದಿ ವೇದಿಕೆ ಒಸಿಸಿ ಆರ್ ಪಿ ಆಗಿದ್ದು, ಭಾರತದ ಕೆಲವು ನಿರ್ದಿಷ್ಟ ಕಾರ್ಪೊರೇಟ್ ಸಂಸ್ಥೆಗಳ ಬಗ್ಗೆ ಸರಣಿ ಲೇಖನಗಳನ್ನು, ವರದಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಈ ಬಗ್ಗೆ ಅರಿವಿರುವ ಮೂಲಗಳು ತಿಳಿದುಬಂದಿದೆ.

ಆದರೆ ಒಸಿಸಿಆರ್ ಪಿಗೆ ಕೇಳಿದ ಪ್ರಶ್ನೆಗಳಿಗೆ ಈ ವರೆಗೂ ಉತ್ತರ ಬಂದಿಲ್ಲ. 2006 ರಲ್ಲಿ ಸ್ಥಾಪಿತವಾದ ಒಸಿಸಿಆರ್ ಪಿ ಸಂಘಟಿತ ಅಪರಾಧಗಳ ಕುರಿತು ವರದಿ ಮಾಡುವುದರಲ್ಲಿ ಪರಿಣತಿ ಹೊಂದಿರುವುದಾಗಿ ಹೇಳಿಕೊಂಡಿದೆ ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಪಾಲುದಾರಿಕೆಯ ಮೂಲಕ ಈ ಸುದ್ದಿ ಲೇಖನಗಳನ್ನು ಹೆಚ್ಚಾಗಿ ಪ್ರಕಟಿಸುತ್ತದೆ.

ತನ್ನ ವೆಬ್ ಸೈಟ್ ನಲ್ಲಿ ಒಸಿಸಿಆರ್ ಪಿ ಜಾರ್ಜ್ ಸೊರೊಸ್  ನ ಓಪನ್ ಸೊಸೈಟಿ ಫೌಂಡೇಷನ್ಸ್ ಜೊತೆಗೆ ಗುರುತಿಸಿಕೊಂಡಿದ್ದು, ಜಾರ್ಜ್ ಸೋರಸ್ ನ್ನು ಸಂಸ್ಥೆಯ ದಾನಿಗಳೆಂದು ಗುರುತಿಸಿದೆ. ಫೋರ್ಡ್ ಫೌಂಡೇಷನ್, ರಾಕ್ ಫೆಲ್ಲರ್ ಬ್ರದರ್ಸ್ ಫಂಡ್, ಓಕ್ ಫೌಂಡೇಷನ್ ಸಹ ಇದಕ್ಕೆ ದಾನಿಗಳಾಗಿದ್ದಾರೆ. 

ಅದಾನಿ ಸಮೂಹದ ಮೇಲಿನ ವರದಿಯ ಮಾದರಿಯಲ್ಲಿ ಹಲವು ಸಂಗತಿಗಳ 'ಬಹಿರಂಗಪಡಿಸುವಿಕೆ'ಯು ಕಾರ್ಪೊರೇಟ್ ಹೌಸ್‌ನ ಷೇರುಗಳಲ್ಲಿ ಹೂಡಿಕೆ ಮಾಡುವ ಸಾಗರೋತ್ತರ ನಿಧಿಗಳನ್ನು ಒಳಗೊಂಡಿರಬಹುದು ಎಂದು ಮೂಲಗಳು ತಿಳಿಸಿವೆ.

SCROLL FOR NEXT