ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಏರ್ ಇಂಡಿಯಾದ ಆಂತರಿಕ ಸುರಕ್ಷತೆ ಪರಿಶೋಧನೆಯಲ್ಲಿ ಸುಳ್ಳು ವರದಿ ಪತ್ತೆ ಮಾಡಿದ ಡಿಜಿಸಿಎ

ಪ್ರಯಾಣಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದ ದ್ವಿಸದಸ್ಯ ತಂಡ ನಡೆಸಿದ ತಪಾಸಣೆಯಲ್ಲಿ ಏರ್ ಇಂಡಿಯಾದ ಆಂತರಿಕ ಸುರಕ್ಷತೆಯಲ್ಲಿ ಕೊರತೆ ಪತ್ತೆಯಾಗಿದೆ ಎಂಬ ಅಂಶ ತಿಳಿದುಬಂದಿದೆ.

ಏರ್ ಇಂಡಿಯಾ ವಿಮಾನ
Srinivas Rao BV
Updated On : 25 Aug 2023, 10:19 pm

ನವದೆಹಲಿ: ಪ್ರಯಾಣಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದ ದ್ವಿಸದಸ್ಯ ತಂಡ ನಡೆಸಿದ ತಪಾಸಣೆಯಲ್ಲಿ ಏರ್ ಇಂಡಿಯಾದ ಆಂತರಿಕ ಸುರಕ್ಷತೆಯಲ್ಲಿ ಕೊರತೆ ಪತ್ತೆಯಾಗಿದೆ ಎಂಬ ಅಂಶ ತಿಳಿದುಬಂದಿದೆ. 

ಈ ವಿಷಯವಾಗಿ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಬಗ್ಗೆ ಏರ್ ಇಂಡಿಯಾದ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಏರ್‌ಲೈನ್‌ಗಳು ನಿಯಂತ್ರಕರು ಮತ್ತು ಇತರ ಸಂಸ್ಥೆಗಳಿಂದ ನಿಯಮಿತ ಸುರಕ್ಷತಾ ಲೆಕ್ಕಪರಿಶೋಧನೆಗೆ ಒಳಪಟ್ಟಿರುತ್ತವೆ. "ನಮ್ಮ ಪ್ರಕ್ರಿಯೆಗಳನ್ನು ನಿರಂತರವಾಗಿ ನಿರ್ಣಯಿಸಲು ಮತ್ತು ಬಲಪಡಿಸಲು ಏರ್ ಇಂಡಿಯಾ ಇಂತಹ ಲೆಕ್ಕಪರಿಶೋಧನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಸಂಬಂಧಪಟ್ಟ ಪ್ರಾಧಿಕಾರದೊಂದಿಗೆ ಎತ್ತಿರುವ ಯಾವುದೇ ವಿಷಯಗಳನ್ನು ವಿಮಾನಯಾನ ಸಂಸ್ಥೆ ನೇರವಾಗಿ ತಿಳಿಸುತ್ತದೆ ಎಂದು ವಕ್ತಾರರು ಹೇಳಿದ್ದಾರೆ. 

Advertisement

Advertisement

ಡಿಜಿಸಿಎಗೆ ಸಲ್ಲಿಸಿದ ತಪಾಸಣಾ ವರದಿಯ ಪ್ರಕಾರ, ವಿಮಾನಯಾನ ಸಂಸ್ಥೆಯು ಕ್ಯಾಬಿನ್ ಕಣ್ಗಾವಲು, ಸರಕು, ರ‍್ಯಾಂಪ್ ಮತ್ತು ಲೋಡ್‌ನಂತಹ ಕಾರ್ಯಾಚರಣೆಯ ವಿವಿಧ ಕ್ಷೇತ್ರಗಳಲ್ಲಿ ನಿಯಮಿತ ಸುರಕ್ಷತಾ ಸ್ಥಳ ಪರಿಶೀಲನೆಗಳನ್ನು ನಡೆಸಬೇಕಾಗಿತ್ತು ಆದರೆ  13 ಸುರಕ್ಷತಾ ಬಿಂದುಗಳ ತಪಾಸಣೆಯ ಸಮಯದಲ್ಲಿ, ಎಲ್ಲಾ 13 ಪ್ರಕರಣಗಳಲ್ಲಿ ಸುಳ್ಳು ವರದಿಗಳನ್ನು ಸಂಸ್ಥೆ ಸಿದ್ಧಪಡಿಸಿರುವುದು ಡಿಜಿಸಿಎ ತಂಡ ಕಂಡುಹಿಡಿದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments