ದೇಶ

ಲಡಾಖ್‌ನಲ್ಲಿ ಎರಡು ಬಾರಿ ಭೂಕಂಪನ!

Vishwanath S

ನವದೆಹಲಿ: ಇಂದು ಲಡಾಖ್‌ನಲ್ಲಿ ಎರಡು ಬಾರಿ ಭೂಕಂಪನ ಸಂಭವಿಸಿದೆ. 8 ಗಂಟೆಯೊಳಗೆ ಎರಡು ಬಾರಿ ಭೂಮಿ ಕಂಪಿಸಿದ್ದು ಮೊದಲ ಭೂಕಂಪನ ಬೆಳಿಗ್ಗೆ 8.25 ಕ್ಕೆ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 3.4ರಷ್ಟು ದಾಖಲಾಗಿತ್ತು.

ಎರಡನೇ ಭೂಕಂಪನ 4.29ಕ್ಕೆ ಸಂಭವಿಸಿದ್ದು ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.7ರಷ್ಟು ದಾಖಲಾಗಿದೆ. ಕಡಿಮೆ ತೀವ್ರತೆಯ ಕಾರಣ, ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಮೊದಲ ಭೂಕಂಪವು ಇದರ ಕೇಂದ್ರವು 35.44 ಡಿಗ್ರಿ ಅಕ್ಷಾಂಶ ಮತ್ತು 77.36 ಡಿಗ್ರಿ ರೇಖಾಂಶದಲ್ಲಿ ಮೇಲ್ಮೈಯಿಂದ 10 ಕಿಲೋಮೀಟರ್ ಕೆಳಗೆ ಇತ್ತು.

3. 7ರ ತೀವ್ರತೆಯ ಎರಡನೇ ಭೂಕಂಪವು 35. 23 ಡಿಗ್ರಿ ಅಕ್ಷಾಂಶ ಮತ್ತು 77. 59 ಡಿಗ್ರಿ ರೇಖಾಂಶದಲ್ಲಿ ಮೇಲ್ಮೈಯಿಂದ 5 ಕಿಲೋಮೀಟರ್ ಕೆಳಗೆ ಇತ್ತು.

ಕೇಂದ್ರಾಡಳಿತ ಪ್ರದೇಶದಲ್ಲಿ ಎಲ್ಲಿಯೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭೂವಿಜ್ಞಾನಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಎರಡು ಪ್ಲೇಟ್‌ಗಳ ನಡುವೆ ಹೆಚ್ಚಿದ ಆಂತರಿಕ ಘರ್ಷಣೆಯಿಂದಾಗಿ, ಈ ಪ್ರದೇಶಗಳಲ್ಲಿ ಭೂಕಂಪದ ಹೆಚ್ಚಿನ ಘಟನೆಗಳು ಕಂಡುಬರುತ್ತಿವೆ. ಅಫ್ಘಾನಿಸ್ತಾನ, ಜಮ್ಮು ಕಾಶ್ಮೀರ, ನೇಪಾಳ, ಅರುಣಾಚಲ ಪ್ರದೇಶ ಮುಂತಾದ ಪ್ರದೇಶಗಳಲ್ಲಿ ಈ ಹಿಂದೆ ಭೂಕಂಪದ ಘಟನೆಗಳು ನಿರಂತರವಾಗಿ ವರದಿಯಾಗುತ್ತಿರುವುದಕ್ಕೆ ಇದೇ ಕಾರಣ.

SCROLL FOR NEXT