ರಾಘವ್ ಚಡ್ಡಾ 
ದೇಶ

ಎಎಪಿ ಸಂಸದ ರಾಘವ್ ಚಡ್ಡಾ ಅಮಾನತು ಹಿಂಪಡೆದ ಉಪಾಧ್ಯಕ್ಷ ಜಗದೀಪ್ ಧಂಖರ್!

ರಾಜ್ಯಸಭೆಯಿಂದ ಅಮಾನತುಗೊಂಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ಸಂಸತ್ತಿಗೆ ಮರಳಿದ್ದಾರೆ. ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಇಂದು ರಾಘವ್ ಚಡ್ಡಾ ಅವರ ವಾಪಸಾತಿಗೆ ಉಪಾಧ್ಯಕ್ಷರ ಮುಂದೆ ಪ್ರಸ್ತಾವನೆಯನ್ನು ಮಂಡಿಸಿದರು.

ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ಸಂಸತ್ತಿಗೆ ಮರಳಿದ್ದಾರೆ. ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಇಂದು ರಾಘವ್ ಚಡ್ಡಾ ಅವರ ವಾಪಸಾತಿಗೆ ಉಪಾಧ್ಯಕ್ಷರ ಮುಂದೆ ಪ್ರಸ್ತಾವನೆಯನ್ನು ಮಂಡಿಸಿದ್ದು ಅದರ ಮೇಲೆ ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಎಎಪಿ ಸಂಸದ ರಾಘವ್ ಚಡ್ಡಾ ಅವರ ಅಮಾನತು ರದ್ದುಗೊಳಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರೀಯ ಕೇಡರ್ ಅಧಿಕಾರಿಗಳ ಪೋಸ್ಟಿಂಗ್ ಮತ್ತು ವರ್ಗಾವಣೆಯ ವಿಷಯದ ಕುರಿತು ಮಾಡಿದ ಕಾನೂನಿಗೆ ಕೆಲವು ಸದಸ್ಯರಿಗೆ ಬೆಂಬಲ ಪತ್ರವನ್ನು ನೀಡಿದ ನಂತರ ರಾಘವ್ ಚಡ್ಡಾ ಅವರನ್ನು ಆಗಸ್ಟ್ 11ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಏಕೆಂದರೆ ಪತ್ರದಲ್ಲಿ ಹೆಸರು ಬರೆದಿರುವ ಕೆಲವು ಸದಸ್ಯರು ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಹೆಸರನ್ನು ಬರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಂಚನೆ ಮಾಡುವ ಮೂಲಕ ಸಂಸದರ ಸವಲತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಚಡ್ಡಾ ವಿರುದ್ಧ ಆರೋಪಿಸಲಾಗಿದೆ.

ವಾಸ್ತವವಾಗಿ, ಚಡ್ಡಾ ಅವರು ತಮ್ಮ ಪತ್ರದಲ್ಲಿ ಸಹಿಯನ್ನು ತೋರಿಸಿರುವ ಐವರು ಸಂಸದರು ತಮ್ಮ ಒಪ್ಪಿಗೆಯಿಲ್ಲದೆ ದೆಹಲಿ ಸೇವೆಗಳ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಸ್ತಾವನೆಯನ್ನು ಆಪ್ ಸಂಸದ ರಾಘವ್ ಚಡ್ಡಾ ಮಂಡಿಸಿದ್ದರು. ಈ ಪ್ರಸ್ತಾಪಕ್ಕೆ ಬಿಜೆಪಿಯ ಮೂವರು ಸಂಸದರು ವಿರೋಧ ವ್ಯಕ್ತಪಡಿಸಿದ್ದರು. ಒಬ್ಬರು ಬಿಜೆಡಿಯವರು ಮತ್ತು ಎಐಎಡಿಎಂಕೆ ಸಂಸದರೂ ಭಾಗಿಯಾಗಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಸದನದಲ್ಲಿ ತನಿಖೆಗೆ ಆದೇಶಿಸುವುದರೊಂದಿಗೆ, ವರದಿ ಬರುವವರೆಗೆ ಚಡ್ಡಾ ಅವರನ್ನು ಅಮಾನತುಗೊಳಿಸಲಾಯಿತು. ರಾಜ್ಯಸಭೆಯಿಂದ ಅಮಾನತುಗೊಂಡ ನಂತರ, ರಾಘವ್ ಚಡ್ಡಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT