ದೇಶ

ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರ ಬಗ್ಗೆ ನಮಗೆ ಕಳವಳವಿದೆ: ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಜೈಶಂಕರ್ 

Srinivas Rao BV

ನವದೆಹಲಿ: ಹಮಾಸ್-ಇಸ್ರೇಲ್ ಯುದ್ಧದಿಂದ ಉಂಟಾಗಿರುವ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರ ಬಗ್ಗೆ ನಮಗೆ ಕಳವಳವಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಹಮಾಸ್-ಇಸ್ರೇಲ್ ಸಂಘರ್ಷದಿಂದ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಭಾರತವು ಕಳವಳ ಹೊಂದಿದೆ ಮತ್ತು "ಸಂಯಮ ಮತ್ತು ರಾಜತಾಂತ್ರಿಕತೆಯ" ಮೂಲಕ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಒತ್ತು ನೀಡಲು ಜೈಶಂಕರ್ ಕರೆ ನೀಡಿದ್ದಾರೆ.  

ಅ.07 ರಂದು ಇಸ್ರೇಲ್ ಮೇಲಿನ ಭಯೋತ್ಪಾದಕ ದಾಳಿ ಮತ್ತು ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕರ ಪ್ರಾಣಹಾನಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಲೋಕಸಭೆಗೆ ತಿಳಿಸಿದರು.

ಮಾನವೀಯ ಆಧಾರದಲ್ಲಿ ವಿರಾಮಗಳು ಮತ್ತು ಒತ್ತೆಯಾಳುಗಳ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ, ”ಎಂದು ಜೈಶಂಕರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಜೈಶಂಕರ್ ಅವರು ಇಸ್ರೇಲ್ ಅಧ್ಯಕ್ಷರು ಮತ್ತು ಪ್ರಧಾನಿ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷರು ಸೇರಿದಂತೆ ಪ್ರದೇಶದ ಮತ್ತು ಪ್ರಪಂಚದಾದ್ಯಂತದ ಹಲವಾರು ನಾಯಕರೊಂದಿಗೆ ಹಮಾಸ್-ಇಸ್ರೇಲ್ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

"G20, BRICS ಮತ್ತು ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತ ಗಾಜಾದಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು ತನ್ನ ನಿಲುವನ್ನು ಪುನರುಚ್ಚರಿಸಿದೆ" ಎಂದು ಜೈಶಂಕರ್ ಹೇಳಿದ್ದಾರೆ. ಇಸ್ರೇಲ್‌ನಿಂದ "ಆಪರೇಷನ್ ಅಜಯ್" ಅಡಿಯಲ್ಲಿ ಕಾರ್ಯನಿರ್ವಹಿಸುವ ಆರು ವಿಶೇಷ ವಿಮಾನಗಳಲ್ಲಿ 1,309 ಭಾರತೀಯ ಪ್ರಜೆಗಳು ದೇಶಕ್ಕೆ ಮರಳಿದ್ದಾರೆ ಎಂದು ಅವರು ಹೇಳಿದರು.

SCROLL FOR NEXT