ಆರೋಪಿ ನೀಲಂ 
ದೇಶ

ಸಂಸತ್ ನಲ್ಲಿ ಭದ್ರತಾ ಲೋಪ: ಆರೋಪಿ ನೀಲಂ INDIA ಒಕ್ಕೂಟದ ಬೆಂಬಲಿಗರು- ಬಿಜೆಪಿ ಐಟಿ ಸೆಲ್

ಲೋಕಸಭೆಯಲ್ಲಿ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿ ನೀಲಂ ಆಜಾದ್ ಇಂಡಿಯಾ ಒಕ್ಕೂಟದ ಬೆಂಬಲಿಗರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.

ನವದೆಹಲಿ: ಲೋಕಸಭೆಯಲ್ಲಿ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿ ನೀಲಂ ಆಜಾದ್ ಇಂಡಿಯಾ ಒಕ್ಕೂಟದ ಬೆಂಬಲಿಗರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಂಧಿತ ಮಹಿಳೆ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವಂತೆ ಕಂಡುಬರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಆಡಳಿತ ಬದಲಾವಣೆ ಕಾಂಗ್ರೆಸ್ ನಾಯಕರು ಆಗಾಗ್ಗೆ ಬಳಸುವ ನುಡಿಗಟ್ಟು ಎಂದಿದ್ದಾರೆ. 

ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದ ಮಹಿಳೆ ನೀಲಂ ಆಜಾದ್ ಕಾಂಗ್ರೆಸ್, ಇಂಡಿಯಾ ಒಕ್ಕೂಟದ ಬೆಂಬಲಿಗರಾಗಿದ್ದಾರೆ. ಅವರು ಆಂದೋಲಂಜೀವಿ, ಅವರು ಹಲವಾರು ಪ್ರತಿಭಟನೆಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. 

"ಅವರನ್ನು ಯಾರು ಕಳುಹಿಸಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಬಿಜೆಪಿ ಸಂಸದರಿಂದ ಸಂಸತ್ತಿನ ಪಾಸ್ ಪಡೆಯಲು ಅವರು ಮೈಸೂರನ್ನು ಏಕೆ ಆಯ್ಕೆ ಮಾಡಿದರು. ನೆನಪಿಡಿ ಪ್ರತಿಪಕ್ಷಗಳು, ನಮ್ಮ ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯಾದ ಸಂಸತ್ ಅಪವಿತ್ರ ಸೇರಿದಂತೆ ಯಾವುದಕ್ಕೂ ತಲೆಕೆಡಿಸಿಕೊಡುವುದಿಲ್ಲ ಎಂದು ಆರೋಪಿಸಿದ್ದಾರೆ. 

ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಮತ್ತೊಬ್ಬ ಆರೋಪಿ ಮನೋರಂಜನ್ ಅವರ ತಂದೆಯ ವೀಡಿಯೊವನ್ನು ಟ್ಯಾಗ್ ಮಾಡುವ ಪ್ರತ್ಯೇಕ ಪೋಸ್ಟ್‌ನಲ್ಲಿ, ಮನೋರಂಜನ್ ಕಾಂಗ್ರೆಸ್  ಥವಾ ಎಸ್‌ಎಫ್‌ಐ ಪ್ರಾಯೋಜಿತ ಚಳುವಳಿಗಳಲ್ಲಿ ಸಕ್ರಿಯರಾಗಿದ್ದಾರಾ? ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದೀರಾ? ಇದರ ಬಗ್ಗೆ ಅಂತಿಮ ಮಾತು ಇನ್ನೂ ಹೊರಬಿದ್ದಿಲ್ಲ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ವಿರೋಧ ಪಕ್ಷಗಳು ಡಿಸೆಂಬರ್ 13 ರಂದು ಸಂಸತ್ತನ್ನು ಒಂದು ಉದ್ದೇಶದಿಂದ ಅಪವಿತ್ರಗೊಳಿಸಿತು ಎಂದು ಅವರು ಆರೋಪಿಸಿದ್ದಾರೆ.

ಮತ್ತೊಂದೆಡೆ ಅಮಿತ್ ಮಾಳವಿಯಾ  ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ. ಬಿಜೆಪಿ ಐಟಿ ಸೆಲ್ 2 ಸಂಗತಿಗಳಿಂದ ಗಮನ ಸೆಳೆಯಲು ತೀವ್ರವಾಗಿ ಬಯಸಿದೆ .

1. ಸಂಸತ್ತಿನ ಭದ್ರತೆಯಲ್ಲಿ ಬಹಳ ಗಂಭೀರವಾದ ಉಲ್ಲಂಘನೆಯಾಗಿದೆ. 2. ಆಘಾತಕಾರಿ ರೀತಿಯಲ್ಲಿ ಲೋಕಸಭೆಯ ಭದ್ರತೆಯನ್ನು ಉಲ್ಲಂಘಿಸಿ ಒಳನುಗ್ಗಿದವರು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಂದ ಪ್ರವೇಶ ಪಾಸ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT