ದೇಶ

ಪ್ರಾಚೀನರ ಕ್ಲಬ್: ವಿಶ್ವಸಂಸ್ಥೆ ಭದ್ರತಾ ಮಂಡಳಿ ಬಗ್ಗೆ ಎಸ್ ಜೈಶಂಕರ್ ತೀವ್ರ ಟೀಕಾ ಪ್ರಹಾರ!

Srinivas Rao BV

ಬೆಂಗಳೂರು: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀವ್ರ ಟೀಕಾ ಪ್ರಹಾರ ನಡೆಸಿದ್ದು, ಅದನ್ನು ಪ್ರಾಚೀನ ಕ್ಲಬ್ (ಓಲ್ಡ್ ಕ್ಲಬ್) ಎಂದು ಹೇಳಿದ್ದಾರೆ. 

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯರು ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಯನ್ನು ಒಪ್ಪುವ ಮನಸ್ಥಿತಿ ಹೊಂದಿಲ್ಲ, ಬೇರೆ ರಾಷ್ಟ್ರಗಳಿಗೆ ಅವಕಾಶ ನೀಡಿದರೆ, ಹಿಡಿತವನ್ನು ಕಳೆದುಕೊಂಡಂತಾಗುತ್ತದೆ ಎಂದು ಸದಸ್ಯ ರಾಷ್ಟ್ರಗಳು ಗ್ರಹಿಸುತ್ತವೆ ಎಂದು ಜೈಶಂಕರ್ ಹೇಳಿದ್ದಾರೆ.

ಬೆಂಗಳೂರಿನ ರೋಟರಿ ಇನ್ಸ್ಟಿಟ್ಯೂಟ್ 2023 ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜೈಶಂಕರ್, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಾಷ್ಟ್ರಗಳಿಗೆ ತಮ್ಮನ್ನು ಯಾರೂ ಪ್ರಶ್ನಿಸುವುದು ಬೇಕಿಲ್ಲ. ಇದೊಂದು ವೈಫಲ್ಯ ಎಂದು ಹೇಳಿರುವ ವಿದೇಶಾಂಗ ಸಚಿವರು, ಯಾವುದೇ ಸುಧಾರಣೆಗಳಿಲ್ಲದೆ, ಯುಎನ್ ಕಡಿಮೆ ಪರಿಣಾಮಕಾರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಒಂದು ರೀತಿಯಲ್ಲಿ, ಇದು ಮನುಕುಲದ ವೈಫಲ್ಯವಾಗಿದೆ. ಆದರೆ ಇಂದು ಅದು ಜಗತ್ತಿಗೆ ಹಾನಿ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ. "ಇದು ಜಗತ್ತಿಗೆ ಹಾನಿ ಮಾಡುತ್ತಿದೆ ಏಕೆಂದರೆ, ಜಗತ್ತು ಎದುರಿಸುತ್ತಿರುವ ಪ್ರಮುಖ ವಿಷಯಗಳಲ್ಲಿ, ಯುಎನ್ ಕಡಿಮೆ ಮತ್ತು ಕಡಿಮೆ ಪರಿಣಾಮಕಾರಿಯಾಗುತ್ತಿದೆ" ಎಂದು ಜೈಶಂಕರ್ ಹೇಳಿದ್ದಾರೆ.

SCROLL FOR NEXT