ಸಾಂದರ್ಭಿಕ ಚಿತ್ರ 
ದೇಶ

ಲಖನೌದ ಎಸ್‌ಜಿಪಿಜಿಐ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಬೆಂಕಿ ದುರಂತ; ಮಹಿಳೆ ಮತ್ತು ಐದು ವಾರಗಳ ಮಗು ಸಾವು!

ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ (ಎಸ್‌ಜಿಪಿಜಿಐ) ಆಪರೇಷನ್ ಥಿಯೇಟರ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ 25 ದಿನದ ನವಜಾತ ಶಿಶು ಮತ್ತು ಮಹಿಳೆ ಸಾವನ್ನಪ್ಪಿದ್ದಾರೆ.

ಲಖನೌ: ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ (ಎಸ್‌ಜಿಪಿಜಿಐ) ಆಪರೇಷನ್ ಥಿಯೇಟರ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ 25 ದಿನದ ನವಜಾತ ಶಿಶು ಮತ್ತು ಮಹಿಳೆ ಸಾವನ್ನಪ್ಪಿದ್ದಾರೆ. 

ಅಗ್ನಿ ಅವಘಡದ ವೇಳೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಮಹಿಳೆಯನ್ನು ಬಿಟ್ಟು ಓಡಿ ಹೋಗಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಮಹಿಳೆಯ ಸುಟ್ಟ ದೇಹವನ್ನು ಹೊರತೆಗೆದಿದ್ದಾರೆ. ಒಟಿ ಕಾಂಪ್ಲೆಕ್ಸ್, ಐಸಿಯು ಮತ್ತು ಸಿಸಿಎಂಗಳಲ್ಲಿ ಹೊಗೆ ತುಂಬಿದ್ದರಿಂದ ಜನರು ಉಸಿರಾಡಲು ಕಷ್ಟಪಟ್ಟರು. 

ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಾರ್ಥ ಸಾರಥಿ ಸೇನ್ ಶರ್ಮಾ ಅವರು ಘಟನೆಯ ಕುರಿತು ಸಂಸ್ಥೆಯ ನಿರ್ದೇಶಕರಿಂದ ಮಾಹಿತಿ ಪಡೆದರು.

ಎಸ್‌ಜಿಪಿಜಿಐನ ಹಳೆಯ ಒಟಿ ಕಾಂಪ್ಲೆಕ್ಸ್‌ನಲ್ಲಿ ಈ ಹಿಂದೆ 17 ಓಟಿಗಳು ಚಾಲನೆಯಲ್ಲಿದ್ದು ಈಗ ಮೂರು ಓಟಿಗಳು ಮಾತ್ರ ಚಾಲನೆಯಲ್ಲಿವೆ. ಎಂಡೋಕ್ರೈನ್ ಸರ್ಜರಿ ವಿಭಾಗದ ಒಟಿಯಲ್ಲಿ ಪಿಲಿಭಿತ್ ನಿವಾಸಿ ತೈಬಾ (26) ಮತ್ತು ಇನ್ನೊಂದು ಒಟಿಯಲ್ಲಿ ಗಾಜಿಪುರ ನಿವಾಸಿ ನೇಹಾ 25 ದಿನದ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸೋಮವಾರ ಮಧ್ಯಾಹ್ನ 12:40ರ ಸುಮಾರಿಗೆ ಮಾನಿಟರ್‌ನಲ್ಲಿ ಕಿಡಿ ಕಾಣಿಸಿಕೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ನೌಕರರಿಗೆ ಏನಾದರೂ ಅರ್ಥವಾಗುವ ಮುನ್ನವೇ ಜೋರಾಗಿ ಸ್ಫೋಟ ಸಂಭವಿಸಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಆಪರೇಷನ್ ಥಿಯೇಟರ್‌ಗೂ ವ್ಯಾಪಿಸಿತು. 

ಒಟಿನಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ರೋಗಿಯನ್ನು ಬಿಟ್ಟು ಓಡಿಹೋದರು. ಅರಿವಳಿಕೆಯಿಂದಾಗಿ ಇಬ್ಬರೂ ರೋಗಿಗಳು ಪ್ರಜ್ಞಾಹೀನರಾಗಿದ್ದರು. ಮಗುವನ್ನು ಒಟಿಯಿಂದ ಹೊರತೆಗೆದು ಡಯಾಲಿಸಿಸ್ ಘಟಕದ ಐಸಿಯುಗೆ ಸ್ಥಳಾಂತರಿಸುವಾಗ ಮಹಿಳೆ ಒಟಿಯಲ್ಲಿಯೇ ಸುಟ್ಟು ಕರಕಲಾಗಿದ್ದಾರೆ. ಆದರೂ ಮಗುವಿನ ಪ್ರಾಣ ಉಳಿಸಲಾಗಲಿಲ್ಲ. ಏತನ್ಮಧ್ಯೆ, ಶಸ್ತ್ರಚಿಕಿತ್ಸೆಯ ನಂತರದ ವಾರ್ಡ್, ಐಸಿಯು ಮತ್ತು ಹತ್ತಿರದ ಇತರ ರೋಗಿಗಳನ್ನು ಇತರ ವಿಭಾಗಗಳಿಗೆ ಸ್ಥಳಾಂತರಿಸಲಾಯಿತು ಮತ್ತು ಸುರಕ್ಷಿತಗೊಳಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT