ಬಂಧನಕ್ಕೊಳಗಾದ ಯುವಕರು 
ದೇಶ

ಅಮೃತಸರ: ಹೆರಾಯಿನ್‌ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಬಿಎಸ್‌ಎಫ್, ಮೂವರು ಯುವಕರ ಬಂಧನ

ಗಡಿ ಭದ್ರತಾ ಪಡೆ ಪಂಜಾಬ್‌ನ ಅಮೃತಸರದಲ್ಲಿ ಹೆರಾಯಿನ್ ಕಳ್ಳಸಾಗಣೆಯೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಿದೆ. ಕಳ್ಳಸಾಗಣೆದಾರರಿಂದ ಒಟ್ಟು  525 ಗ್ರಾಂ ಹೆರಾಯಿನ್‌ ವಶಪಡಿಸಿಕೊಂಡಿರುವುದಾಗಿ ಬಿಎಸ್‌ಎಫ್ ತಿಳಿಸಿದೆ.

ಅಮೃತಸರ: ಗಡಿ ಭದ್ರತಾ ಪಡೆ ಪಂಜಾಬ್‌ನ ಅಮೃತಸರದಲ್ಲಿ ಹೆರಾಯಿನ್ ಕಳ್ಳಸಾಗಣೆಯೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಿದೆ. ಕಳ್ಳಸಾಗಣೆದಾರರಿಂದ ಒಟ್ಟು  525 ಗ್ರಾಂ ಹೆರಾಯಿನ್‌ ವಶಪಡಿಸಿಕೊಂಡಿರುವುದಾಗಿ ಬಿಎಸ್‌ಎಫ್ ತಿಳಿಸಿದೆ.

ಭಾನುವಾರ ಅಮೃತಸರ ಜಿಲ್ಲೆಯ ಧಾನೋ ಕಲಾನ್ ಗ್ರಾಮದ ಬಳಿ ಕಳ್ಳಸಾಗಣೆ ಚಟುವಟಿಕೆಗಳ ಬಗ್ಗೆ ಬಿಎಸ್ ಎಫ್ ನ ವಿಶೇಷ ಮಾಹಿತಿ ಆಧಾರದ ಮೇಲೆ, ವಿಶೇಷ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು. 12-15 ರ ಸುಮಾರಿನಲ್ಲಿ ಹೊಲದಲ್ಲಿ ಇಬ್ಬರು ಶಂಕಿತ ಕಳ್ಳಸಾಗಣೆದಾರರ ಚಲನವಲನವನ್ನು ಡ್ರೋನ್ ನಲ್ಲಿ ಗಮನಿಸಲಾಯಿತು. ತಕ್ಷಣವೇ ಇಬ್ಬರೂ ಕಳ್ಳಸಾಗಣೆದಾರರನ್ನು ಬಂಧಿಸಲಾಯಿತು. ಅವರು ಹೆರಾಯಿನ್ ರವಾನೆಯೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಬಿಎಸ್ಎಫ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. 

"ಇಬ್ಬರೂ ಕಳ್ಳಸಾಗಾಣಿಕೆದಾರರು ನೀಡಿದ ಮಾಹಿತಿ ಆಧಾರದ ಮೇಲೆ ಮೂರನೇ ಕಳ್ಳಸಾಗಣೆದಾರನನ್ನು ಸಹ ಬಂಧಿಸಲಾಯಿತು. ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಕಳ್ಳಸಾಗಣೆದಾರರ ಮತ್ತೊಂದು ಪ್ರಯತ್ನವನ್ನು ಜಾಗರೂಕತೆಯಿಂದ ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದ್ದಾಗಿ  ಹೇಳಲಾಗಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು