ದೇಶ

ಇಸ್ರೇಲ್ ನ ದೆಹಲಿ ರಾಯಭಾರ ಕಚೇರಿಯ ಬಳಿ ಸ್ಫೋಟ!

Srinivas Rao BV

ನವದೆಹಲಿ: ದೆಹಲಿಯಲ್ಲಿರುವ ಇಸ್ರೇಲ್ ನ ರಾಯಭಾರ ಕಚೇರಿಯ ಬಳಿ ಸ್ಫೋಟ ನಡೆದಿರುವುದರ ಬಗ್ಗೆ ಕರೆ ಬಂದಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಸ್ಫೋಟಕಗಳು ಸ್ಥಳದಲ್ಲಿ ಸಿಕ್ಕಿಲ್ಲ, ಶೋಧಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪರ್ಕಿಸಿದಾಗ, ಇಸ್ರೇಲಿ ರಾಯಭಾರ ಕಚೇರಿಯ ವಕ್ತಾರ ಗೈ ನಿರ್, "ಸುಮಾರು 5:48 ಕ್ಕೆ ರಾಯಭಾರ ಕಚೇರಿಯ ಸಮೀಪದಲ್ಲಿ ಸ್ಫೋಟ ಸಂಭವಿಸಿದೆ ಎಂದು ನಾವು ಖಚಿತಪಡಿಸಬಹುದು. ದೆಹಲಿ ಪೊಲೀಸರು ಮತ್ತು ಭದ್ರತಾ ತಂಡ ಈ ಬಗ್ಗೆ ಇನ್ನೂ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ" ಎಂದು ಹೇಳಿದ್ದಾರೆ.

ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳ ಪ್ರಕಾರ, ಅವರಿಗೆ ಸಂಜೆ 5:45ಕ್ಕೆ ಸ್ಫೋಟದ ಬಗ್ಗೆ ಕರೆ ಬಂದಿತು ಮತ್ತು ಅದನ್ನು ದೆಹಲಿ ಪೊಲೀಸ್ ಪಿಸಿಆರ್ (ಪೊಲೀಸ್ ಕಂಟ್ರೋಲ್ ರೂಂ) ನಿಂದ ವರ್ಗಾಯಿಸಲಾಗಿತ್ತು.

ಅಗ್ನಿಶಾಮಕ ದಳ ತಕ್ಷಣವೇ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳದಲ್ಲಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ರಾಯಭಾರ ಕಚೇರಿಯ ಹಿಂದೆ ಸ್ಫೋಟ ಸಂಭವಿಸಿದೆ ಎಂದು ಕರೆ ಮಾಡಿದವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದಿ ಭವನದಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಮಾಧ್ಯಮಗಳಿಗೆ ರಾಯಭಾರ ಕಚೇರಿಯ ಹಿಂದೆ ದೊಡ್ಡ ಶಬ್ದವನ್ನು ಕೇಳಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸರ ವಿಶೇಷ ದಳದ ತಂಡ ಕೂಡ ಸ್ಥಳಕ್ಕೆ ತಲುಪಿದೆ.

ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

SCROLL FOR NEXT