ದೇಶ

ಆಂಧ್ರ ಪ್ರದೇಶದ ವಸತಿ ಯೋಜನೆಯಲ್ಲಿ 35,141 ಕೋಟಿ ರೂ. ವಂಚನೆ: ಪ್ರಧಾನಿಗೆ ಪವನ್ ಕಲ್ಯಾಣ್ ಪತ್ರ

Ramyashree GN

ಅಮರಾವತಿ: ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಬಡವರಿಗೆ ಭೂಮಿ ಹಂಚಿಕೆ ಮತ್ತು ಮನೆಗಳನ್ನು ನಿರ್ಮಿಸುವ ನೆಪದಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ನಟ-ರಾಜಕಾರಣಿ ಮತ್ತು ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕೇವಲ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 35,141 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಪವನ್ ಕಲ್ಯಾಣ್ ಆರೋಪಿಸಿದ್ದಾರೆ.

'ಭೂಸ್ವಾಧೀನದ ಹೆಸರಿನಲ್ಲಿ ವಂಚನೆ ಹೆಚ್ಚಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ವಿಜಿಲೆನ್ಸ್ ಮತ್ತು ಜಾರಿ ಇಲಾಖೆಯಿಂದ ತನಿಖೆ ನಡೆಸುವಂತೆ ಸ್ವತಃ ಆಡಳಿತ ಪಕ್ಷದ ಶಾಸಕರೇ ಕೋರಿದ್ದಾರೆ' ಎಂದು ಜನಸೇನಾ ಮುಖ್ಯಸ್ಥರು ಪತ್ರದಲ್ಲಿ ತಿಳಿಸಿದ್ದಾರೆ.

ಭೂಮಿಯ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲಾಗಿದ್ದು, ಮಾಲೀಕರಿಗೆ ಅಲ್ಪ ಮೊತ್ತವನ್ನು ಮಾತ್ರ ಪಾವತಿಸಿದ್ದಾರೆ. ವೈಎಸ್‌ಆರ್‌ಸಿಪಿ ನಾಯಕರು ಹೆಚ್ಚುವರಿ ಹಣವನ್ನು ತಾವೇ ಜೇಬಿಗಿಳಿಸಿಕೊಂಡಿದ್ದಾರೆ. ಅಲ್ಲದೆ, ಇತರ ಅಕ್ರಮಗಳೂ ನಡೆದಿವೆ ಎಂದು ಅವರು ಹೇಳಿದ್ದಾರೆ.

ಪವನ್ ಕಲ್ಯಾಣ್ ಅವರು ಪತ್ರದಲ್ಲಿ ಹೆಚ್ಚಿನ ವಿವರಗಳನ್ನು ಒದಗಿಸಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳಿಂದ ಸೂಕ್ತ ತನಿಖೆ ನಡೆಸಲು ಮತ್ತು ದುರುಪಯೋಗಪಡಿಸಿಕೊಂಡ ಮೊತ್ತವನ್ನು ವಸೂಲಿ ಮಾಡಲು ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸುವಂತೆ ಪ್ರಧಾನಿಗೆ ವಿನಂತಿಸಿದ್ದಾರೆ.

SCROLL FOR NEXT