ಯೋಗ ಗುರು ಬಾಬಾ ರಾಮದೇವ್ 
ದೇಶ

ಮುಸ್ಲಿಂ ವಿರೋಧಿ ಹೇಳಿಕೆ: ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲು!

ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲಾಗಿದೆ.

ಪಾಟ್ನಾ: ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲಾಗಿದೆ.

ಬಿಹಾರ ಮೂಲದ ಹಕ್ಕುಗಳ ಕಾರ್ಯಕರ್ತ ತಮನ್ನಾ ಹಶ್ಮಿ ಎಂಬುವವರು ಯೋಗ ಗುರು ರಾಮ್‌ದೇವ್ ಅವರ ವಿರುದ್ಧ ದೂರು ದಾಖಲಿಸಿದ್ದು, ರಾಮ್ ದೇವ್ ಅವರು ತಮ್ಮ ಇತ್ತೀಚಿನ ಸಭೆಯಲ್ಲಿ ಮುಸ್ಲಿಂ ವಿರೋಧಿ ಹೇಳಿಕೆ ನೀಡಿ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಬಿಹಾರದ ಸ್ಥಳೀಯ ನ್ಯಾಯಾಲಯದಲ್ಲಿ ಹಶ್ಮಿ ಅವರು ರಾಮದೇವ್ ವಿರುದ್ಧ ದೂರು ದಾಖಲಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ವಿರುದ್ಧ ರಾಮ್‌ದೇವ್ ಅವರ ಹೇಳಿಕೆ ಆಕ್ಷೇಪಾರ್ಹವಾಗಿದೆ ಮತ್ತು ಇದು ಅವರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹಶ್ಮಿ ಮುಜಾಫರ್‌ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶುಕ್ರವಾರ ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಧರ್ಮಗುರುಗಳ ಸಭೆಯಲ್ಲಿ, ಯೋಗ ಗುರು ರಾಮ್ ದೇವ್ ಹಿಂದೂ ಧರ್ಮವನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಹೋಲಿಕೆ ಮಾಡುವಾಗ, ಮುಸ್ಲಿಮರು ಭಯೋತ್ಪಾದನೆ ಮತ್ತು ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

EC ಬೇಜವಾಬ್ದಾರಿ ಸಂಸ್ಧೆ: ಸ್ವತಂತ್ರ ಸಂಸ್ಥೆಗಳನ್ನು ಪ್ರಧಾನಿ ಮೋದಿ ನಾಶಪಡಿಸಿದ್ದಾರೆ - ಸಿಎಂ ಸಿದ್ದರಾಮಯ್ಯ

'ನಾಚಿಕೆಗೇಡು.. ಪಾಕ್ ಪರಮಾಣು ಸ್ಥಾವರ ಮೇಲೆ ದಾಳಿ ಮಾಡಲು ಇಂದಿರಾಗಾಂಧಿ ಹಿಂದೇಟು ಹಾಕಿದ್ದರು': ಮಾಜಿ ಸಿಐಎ ಅಧಿಕಾರಿ ಹೇಳಿಕೆ! Video

ನಟಿ ರುಕ್ಮಿಣಿ ವಸಂತ್ ಹೆಸರಲ್ಲಿ ವಂಚನೆ, ನಕಲಿ ಸಂದೇಶಗಳ ವಿರುದ್ಧ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ 'ಕನಕವತಿ'

"ಭೈಯ್ಯಾ ಹೀಗ್ ಮಾಡ್ಬೇಡಿ": ಬೈಕ್ ಟ್ಯಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ; ಸ್ಥಳೀಯರ ಆಕ್ರೋಶ! Video

ಏಲಿಯನ್ ಬಾಹ್ಯಾಕಾಶ ನೌಕೆ? ಬಾಹ್ಯಾಕಾಶದಲ್ಲಿ ನಿಗೂಢ ಅತಿಥಿಯನ್ನು ಕಂಡ ಚೀನಾ! (ಜಾಗತಿಕ ಜಗಲಿ)

SCROLL FOR NEXT