ದೇಶ

ಪ್ರೇಮಿಗಳ ದಿನದಂದು "ಹಸು ಅಪ್ಪುಗೆ ದಿನ" ಆಚರಿಸಿ: ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ

Lingaraj Badiger

ನವದೆಹಲಿ: ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಬದಲಾಗಿ "ಸಕಾರಾತ್ಮಕ ಶಕ್ತಿಯನ್ನು" ಹರಡಲು ಮತ್ತು "ಸಾಮೂಹಿಕ ಸಂತೋಷ" ಉತ್ತೇಜಿಸಲು "ಹಸು ಅಪ್ಪುಗೆ ದಿನ" ಆಚರಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಬುಧವಾರ ದೇಶದ ಜನತೆಗೆ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ಅನ್ನು ಕೌ ಹಗ್ ಡೇ ಆಗಿ ಆಚರಿಸಬಹುದು. ಇದರಿಂದ ತಾಯಿ ಹಸುವಿನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನು ಸಂತೋಷದಿಂದ ಮತ್ತು ಸಕಾರಾತ್ಮಕ ಶಕ್ತಿಯಿಂದ ನಡೆಸಬಹುದು" ಎಂದು ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹಸುಗಳನ್ನು ತಬ್ಬಿಕೊಳ್ಳುವುದರಿಂದ "ಭಾವನಾತ್ಮಕ ಶ್ರೀಮಂತಿಕೆ" ಮತ್ತು "ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ" ಹೆಚ್ಚಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯೋಗ ದಿನದಂತೆಯೇ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸಹಯೋಗದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು 'ಹಸು ಅಪ್ಪುಗೆಯ ದಿನ' ಆಚರಿಸುವ ಉಪಕ್ರಮವನ್ನು ಕೈಗೊಂಡಿದೆ.

SCROLL FOR NEXT