ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ 
ದೇಶ

ಜಾರ್ಖಂಡ್: ಕ್ರೀಡೆ, ಕ್ರೀಡಾಪಟುಗಳಿಗಾಗಿ ದೇಶದ ಮೊದಲ ಡಿಜಿಟಲ್ ಪೋರ್ಟಲ್ ಪ್ರಾರಂಭ

ದೇಶದಲ್ಲೇ ಮೊದಲ ಬಾರಿಗೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗಾಗಿ ಜಾರ್ಖಂಡ್ ಸರ್ಕಾರ ಡಿಜಿಟಲ್ ಪೋರ್ಟಲ್ ಪ್ರಾರಂಭಿಸಿದೆ.

ರಾಂಚಿ: ದೇಶದಲ್ಲೇ ಮೊದಲ ಬಾರಿಗೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗಾಗಿ ಜಾರ್ಖಂಡ್ ಸರ್ಕಾರ ಡಿಜಿಟಲ್ ಪೋರ್ಟಲ್ ಪ್ರಾರಂಭಿಸಿದ್ದು, ಯುವಜನತೆಯಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವುದು ಜೊಹರ್ ಖಿಲಾಡಿ ಸ್ಪೋರ್ಟ್ಸ್ ಇಂಟಿಗ್ರೇಟೆಡ್ ಪೋರ್ಟಲ್ ನ ಉದ್ದೇಶವಾಗಿದೆ. 

ಕ್ರೀಡಾಪಟುಗಳ ಪ್ರತಿಭೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಪೋರ್ಟಲ್ ಉಪಯ್ತುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಹೇಮಂತ್ ಸೊರೇನ್ ಪೋರ್ಟಲ್ ನ್ನು ಉದ್ಘಾಟಿಸಿದ್ದು, ಕ್ರೀಡೆಯ ಡಿಜಿಟಲೀಕರಣದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಹೆಜ್ಜೆ ಇದಾಗಿದೆ ಎಂದು ವಿಶ್ಲೇಶಿಸಲಾಗುತ್ತಿದೆ. ಕ್ರೀಡಾಪಟುಗಳು, ಕೋಚ್, ರೆಫರಿಗಳು, ಕ್ರೀಡಾ ಅಕಾಡೆಮಿಗಳು, ಕ್ರೀಡಾ ಮೈದಾನಗಳು ಮತ್ತು ಕ್ರೀಡಾ ಕ್ರೀಡಾಂಗಣಗಳ ಬಗ್ಗೆ ವಿಸ್ತೃತ ಡೇಟಾಬೇಸ್ ನ್ನು ಈ ವೆಬ್ ಪೋರ್ಟಲ್ ಹೊಂದಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆಯಲಿರುವ ರಾಜ್ಯ, ಜಿಲ್ಲಾ ಮಟ್ಟದ ಸ್ಪರ್ಧೆಗಳ ಬಗ್ಗೆ ಮಾಹಿತಿಯನ್ನೂ ಇನ್ನು ಮುಂದೆ ವೆಬ್ ಪೋರ್ಟಲ್ ನಲ್ಲಿ ನೀಡಲಾಗುತ್ತದೆ. ಒಟ್ಟು 32 ಕ್ರೀಡೆಗಳನ್ನು ಪೋರ್ಟಲ್ ನಲ್ಲಿ ಪಟ್ಟಿ ಮಾಡಲಾಗಿತ್ತು ಒಲಂಪಿಕ್ ಅಸೋಸಿಯೇಶನ್ ನಿಂದ ಗುರುತಿಸಲ್ಪಟ್ಟಿರುವ 32 ಕ್ರೀಡೆಗಳ ಕ್ರೀಡಾಪಟುಗಳು ಈ ವೆಬ್ ಸೈಟ್ ನಿಂದ ಉಪಯೋಗ ಪಡೆಯಬಹುದು ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ವೆಬ್ ಪೋರ್ಟಲ್ ಮೂಲಕ ಕ್ರೀಡಾ ಇಲಾಖೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆಯೂ ಗಮನ ಹರಿಸುವುದಕ್ಕೆ ಸಾಧ್ಯವಾಗಲಿದೆ. ಪ್ರಸ್ತುತ ಫುಟ್ಬಾಲ್ ಗೆ ಸಂಬಂಧಿಸಿದ ನೋಂದಣಿ, ಹಾಕಿ, ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ವಾಲಿಬಾಲ್, ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿಗೆ ಸಂಬಂಧಿಸಿದ ನೋಂದಣಿಗೆ ಅವಕಾಶ ಪೋರ್ಟಲ್ ನಲ್ಲಿ ಪ್ರಗತಿಯಲ್ಲಿದೆ.

ಇನ್ನು ಕ್ರೀಡಾಪಟುಗಳಿಗೆ ಎದುರಾಗುವ ಸಮಸ್ಯೆಗಳ ಬಗ್ಗೆಯೂ ಈ ಪೋರ್ಟಲ್ ಮೂಲಕ ಕ್ರೀಡಾ ಇಲಾಖೆಯ ಗಮನಕ್ಕೆ ತರುವ  ಅವಕಾಶವಿದ್ದು, ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ ಎಂದು ಜಾರ್ಖಂಡ್ ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ: SIR ಕುರಿತ ಚರ್ಚೆಗೆ ವಿಪಕ್ಷಗಳಿಂದ ಪಟ್ಟು, ಸ್ಪಷ್ಟನೆ ನೀಡದ ಸರ್ಕಾರ

ಕುರ್ಚಿ ಕದನ: ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ನಡೆದ ಚರ್ಚೆ ಏನು?

' ನನ್ನ ರಾಜಕೀಯ ನೇರವಾದದ್ದು, ಯಾರ ಬೆನ್ನಿಗೂ ಚೂರಿ ಹಾಕಲ್ಲ, ನನ್ನ ಇತಿಮಿತಿ ತಿಳಿದಿದೆ- DKS ಸೈಲೆಂಟ್ ಗುಟ್ಟೇನು?

ಆತ್ಮ ನಿರ್ಭರತೆಯೆಡೆಗೆ ಮಹತ್ವದ ಮೈಲಿಗಲ್ಲು; ಕರ್ನಾಟಕ ಮೂಲದ ಸ್ಟಾರ್ಟ್ ಅಪ್ ನಿಂದ ಮೊದಲ ದೇಶೀಯ ರಕ್ಷಣಾ AI ತಂತ್ರಜ್ಞಾನ ಅಭಿವೃದ್ಧಿ!

ಶಿವಮೊಗ್ಗ: ಪಠ್ಯ ಪುಸ್ತಕಗಳಲ್ಲಿ 'ಭಗವದ್ಗೀತೆ' ಸೇರಿಸಲು ಕೇಂದ್ರಕ್ಕೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ!

SCROLL FOR NEXT