ದೇಶ

ಮುಂಬೈ-ಶಿರಡಿ, ಮುಂಬೈ-ಸೊಲ್ಲಾಪುರ ಎರಡು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Lingaraj Badiger

ಮುಂಬೈ: ಮುಂಬೈನಿಂದ ಶಿರಡಿ ಮತ್ತು ಮುಂಬೈನಿಂದ ಸೊಲ್ಲಾಪುರಕ್ಕೆ ಎರಡು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(CSMT)ನಲ್ಲಿ ಎರಡು ವಂದೇ ಭಾರತ್ ರೈಲಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ವಂದೇ ಭಾರತ್ ರೈಲುಗಳು 'ಆತ್ಮನಿರ್ಭರ್' (ಸ್ವಾವಲಂಬಿ) ಮತ್ತು 'ವಿಕ್ಷಿತ್' (ಅಭಿವೃದ್ಧಿ ಹೊಂದಿದ) ಭಾರತವಾಗುತ್ತಿರುವದರ ಪ್ರತಿಬಿಂಬವಾಗಿದೆ ಎಂದು ಹೇಳಿದರು.

"21ನೇ ಶತಮಾನದ ಭಾರತವು, ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತ್ವರಿತವಾಗಿ ಸುಧಾರಿಸಬೇಕಾಗಿದೆ. ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅತ್ಯಂತ ವೇಗವಾಗಿ ಆಧುನಿಕ ಮತ್ತು ಸುಧಾರಿತವಾಗುತ್ತಿದೆ. ಇದರಿಂದ ಜನರ ಜೀವನವು ಹೆಚ್ಚು ಸುಲಭವಾಗುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಇದುವರೆಗೆ 17 ರಾಜ್ಯಗಳ 108 ಜಿಲ್ಲೆಗಳು ವಂದೇ ಭಾರತ್ ರೈಲುಗಳ ಮೂಲಕ ವೇಗದ ರೈಲು ಸಂಪರ್ಕವನ್ನು ಪಡೆದಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ 455 ಕಿಮೀ ದೂರವನ್ನು 6 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದ್ದು, ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್ 343 ಕಿಮೀ ದೂರವನ್ನು 5 ಗಂಟೆ 25 ನಿಮಿಷಗಳಲ್ಲಿ ಕ್ರಮಿಸಲಿದೆ.

SCROLL FOR NEXT