ದೇಶ

ಗುಜರಾತ್: ಸೂರತ್ ನಲ್ಲಿ 3.8 ತೀವ್ರತೆಯ ಕಂಪನ ದಾಖಲು, ಸಮುದ್ರದಲ್ಲಿ ಕೇಂದ್ರಬಿಂದು ಪತ್ತೆ

Srinivas Rao BV

ಅಹ್ಮದಾಬಾದ್: ಸೂರತ್ ನಲ್ಲಿ 3.8 ತೀವ್ರತೆಯ ಕಂಪನ ದಾಖಲಾಗಿದ್ದು, ಕಂಪನದ ಕೇಂದ್ರಬಿಂದು ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಭೂಕಂಪಶಾಸ್ತ್ರದ ಸಂಶೋಧನಾ ಸಂಸ್ಥೆ (ಐಎಸ್ಆರ್) ಅಧಿಕಾರಿಗಳು ತಿಳಿಸಿದ್ದಾರೆ. 

ಮಧ್ಯಾಹ್ನ 12:52 ರ ಸುಮಾರಿಗೆ ಕಂಪನ ದಾಖಲಾಗಿದ್ದು, ಸೂರತ್ ನ 27 ಕಿ.ಮೀ ದೂರದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಜಿಲ್ಲೆಯ ಹಾಜಿರಾದಿಂದ ಅರೇಬಿಯನ್ ಸಮುದ್ರ ಭಾಗದಲ್ಲಿನ 5.2 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಈ ಕಂಪನದಿಂದ ಆಸ್ತಿಪಾಸ್ತಿಗಳಿಗೆ ಅಥವಾ ಜೀವಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್ ನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಗುಜರಾತ್ ಅತಿ ಹೆಚ್ಚು ಭೂಕಂಪನದ ಅಪಾಯ ಎದುರಿಸುತ್ತಿದ್ದು, 1819, 1845, 1847, 1848, 1864, 1903, 1938, 1956, 2001 ರಲ್ಲಿ ಪ್ರಮುಖ ಭೂಕಂಪನದ ಘಟನೆಗಳು ವರದಿಯಾಗಿವೆ.
 
2001 ರಲ್ಲಿ ಕಛ್ ನಲ್ಲಿ ಸಂಭವಿಸಿದ್ದ ಭೂಕಂಪ 2 ಶತಮಾನಗಳಲ್ಲೇ ದೇಶದಲ್ಲಿ ಮೂರನೇ ಅತಿ ದೊಡ್ಡ ಭೂಕಂಪವಾಗಿದ್ದು, ಅತಿ ಹೆಚ್ಚು ಹಾನಿ ಉಂಟುಮಾಡಿದ 2 ನೇ ಅಪಾಯಕಾರಿ ಭೂಕಂಪವಾಗಿತ್ತು. ಈ ಭೂಕಂಪನದಿಂದ 13,800 ಮಂದಿ ಸಾವನ್ನಪ್ಪಿದ್ದರೆ, 1.67 ಲಕ್ಷ ಮಂದಿ ಗಾಯಗೊಂಡಿದ್ದರು. 
 

SCROLL FOR NEXT