ದೇಶ

ರಾಜಕೀಯ ಪಕ್ಷಗಳ ದೇಣಿಗೆ ಭರ್ಜರಿ ಹೆಚ್ಚಳ: ಕಳೆದ ವರ್ಷ 614 ಕೋಟಿ ಸಂಗ್ರಹಿಸಿದ ಬಿಜೆಪಿ, ಕಾಂಗ್ರೆಸ್ ಗೆ ಕೇವಲ 95 ಕೋಟಿ

Lingaraj Badiger

ನವದೆಹಲಿ: ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕಳೆದ ವರ್ಷ ಆಡಳಿತರೂಢ ಬಿಜೆಪಿ ಬರೋಬ್ಬರಿ 614 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಮೊದಲ ಸ್ಥಾನದಲ್ಲಿ. ಇನ್ನೂ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಕೇವಲ ಕೇವಲ 95 ಕೋಟಿ ರೂ. ದೇಣಿಗೆ ಸಂಗ್ರಹ ಮಾಡಲಷ್ಟೇ ಶಕ್ತವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌(ಎಡಿಆರ್) ಹೇಳಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ವರದಿಯ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಒಟ್ಟು 187.03 ಕೋಟಿ ರೂಪಾಯಿ ದೇಣಿಗೆ ಪಡೆದಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 31.50 ರಷ್ಟು ಹೆಚ್ಚಳವಾಗಿದೆ.

ಬಿಜೆಪಿಯು ಒಟ್ಟು 4,957 ದೇಣಿಗೆಗಳ ಮೂಲಕ ಒಟ್ಟು 614.63 ಕೋಟಿ ರೂ. ಸಂಗ್ರಹ ಮಾಡಿರೋದಾಗಿ ಘೋಷಿಸಿದೆ. ಇನ್ನು ಕಾಂಗ್ರೆಸ್ ಪಕ್ಷವು 1,255 ದೇಣಿಗೆಗಳ ಮೂಲಕ ಒಟ್ಟು 95.46 ಕೋಟಿ ರೂ. ಸಂಗ್ರಹ ಮಾಡಿರೋದಾಗಿ ಘೋಷಿಸಿದೆ.

ಬಿಜೆಪಿಯು ಘೋಷಣೆ ಮಾಡಿರುವ ಒಟ್ಟು ದೇಣಿಗೆಯ ಪ್ರಮಾಣ ಕಾಂಗ್ರೆಸ್ ಪಕ್ಷಕ್ಕಿಂತಾ 3 ಪಟ್ಟು ಅಧಿಕ ಇರೋದು ಕಂಡು ಬರುತ್ತೆ. ಇದಲ್ಲದೆ, ಎನ್‌ಸಿಪಿ, ಸಿಪಿಐ, ಸಿಪಿಎಂ, ಎನ್‌ಪಿಇಪಿ ಹಾಗೂ ಎಐಟಿಸಿ ಪಕ್ಷಗಳೂ ಕೂಡಾ ಅಲ್ಪ ಪ್ರಮಾಣದ ದೇಣಿಗೆ ಗಿಟ್ಟಿಸಿವೆ.

ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ಕಳೆದ 16 ವರ್ಷಗಳಿಂದ ಘೋಷಿಸುತ್ತಿರುವಂತೆ 2021-22ರ ಅವಧಿಯಲ್ಲೂ ತನಗೆ 20,000 ರೂ.ಗಿಂತ ಮೇಲ್ಪಟ್ಟು ಯಾವೊಂದು ದೇಣಿಗೆಯೂ ಬಂದಿಲ್ಲ ಎಂದು ಘೋಷಿಸಿರುವುದಾಗಿ ಎಂದು ಎಡಿಆರ್ ವರದಿ ಮಾಡಿದೆ.

SCROLL FOR NEXT