ದೇಶ

ಚಿರತೆಗಳ ಆಗಮನದಿಂದ ಭಾರತದ ಜೀವವೈವಿಧ್ಯಕ್ಕೆ ಉತ್ತೇಜನ ಸಿಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

Ramyashree GN

ನವದೆಹಲಿ: ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳ ಆಗಮನದಿಂದ ಭಾರತದ ಜೀವವೈವಿಧ್ಯಕ್ಕೆ ಉತ್ತೇಜನ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

'ಈ ಬೆಳವಣಿಗೆಯೊಂದಿಗೆ ಭಾರತದ ವನ್ಯಜೀವಿ ವೈವಿಧ್ಯತೆಯು ಉತ್ತೇಜನವನ್ನು ಪಡೆಯುತ್ತದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಫೆಬ್ರುವರಿ 18 ರಂದು ಮಾಡಿದ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

'ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಪ್ರಾರಂಭವಾದ ಚೀತಾ ಯೋಜನೆಯು ಇಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ. ಮಧ್ಯ ಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಸಮ್ಮುಖದಲ್ಲಿ 12 ಚಿರತೆಗಳನ್ನು ಬಿಡುಗಡೆ ಮಾಡಲಾಗಿದೆ' ಎಂದು ಯಾದವ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚಿರತೆಗಳನ್ನು ತರಲಾಗಿತ್ತು. ಶನಿವಾರ 12 ಚಿರತೆಗಳ ಆಗಮನದೊಂದಿಗೆ ಭಾರತದಲ್ಲಿ ಒಟ್ಟು 20 ಚಿರತೆಗಳಾಗಿವೆ.

SCROLL FOR NEXT