ದೇಶ

ಎಫ್‌ಸಿಐ ಭ್ರಷ್ಟಾಚಾರ ಪ್ರಕರಣ: ಪಂಜಾಬ್‌ನ 30 ಸ್ಥಳಗಳಲ್ಲಿ ಸಿಬಿಐ ದಾಳಿ

Lingaraj Badiger

ನವದೆಹಲಿ: ವ್ಯಾಪಾರಿಗಳು ಮತ್ತು ಅಕ್ಕಿ ಮಿಲ್ಲುಗಳಿಗೆ ಅನುಕೂಲವಾಗುವಂತೆ ಕಳಪೆ ಧಾನ್ಯಗಳನ್ನು ಖರೀದಿಸಿದ ಭಾರತೀಯ ಆಹಾರ ನಿಗಮದ(ಎಫ್‌ಸಿಐ) ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಮಂಗಳವಾರ ಪಂಜಾಬ್‌ನ 30 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಆಪರೇಷನ್ ಕನಕ್ 2' ಭಾಗವಾಗಿ, ಸಿರ್ಹಿಂದ್, ಫತೇಪುರ್ ಸಾಹಿಬ್ ಮತ್ತು ಮೊಂಗಾ ಸೇರಿದಂತೆ ಪಂಜಾಬ್‌ನ ಅನೇಕ ಜಿಲ್ಲೆಗಳಲ್ಲಿ ಧಾನ್ಯ ವ್ಯಾಪಾರಿಗಳು, ಅಕ್ಕಿ ಮಿಲ್ ಮಾಲೀಕರು ಮತ್ತು ಎಫ್‌ಸಿಐನಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಫ್‌ಸಿಐನಲ್ಲಿನ ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ ಗಳಿಗೆ ಸಂಬಂಧಿಸಿದಂತೆ ಸಿಬಿಐ ಇಂದು ಎರಡನೇ ಸುತ್ತಿನ ದಾಳಿ ನಡೆಸಿದೆ. ಕಳಪೆ ಧಾನ್ಯಗಳನ್ನು ಖರೀದಿಸಿಲು ಎಫ್‌ಸಿಐ ಅಧಿಕಾರಿಗಳು ಪ್ರತಿ ಟ್ರಕ್‌ಗೆ 1000 ದಿಂದ 4000 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ತಾಂತ್ರಿಕ ಸಹಾಯಕರಿಂದ ಹಿಡಿದು ಕಾರ್ಯನಿರ್ವಾಹಕ ನಿರ್ದೇಶಕರವರೆಗಿನ ಎಲ್ಲಾ ಅಧಿಕಾರಿಗಳು ಖಾಸಗಿ ಮಿಲ್ಲರ್‌ಗಳಿಂದ ಲಂಚ ಪಡೆದಿದ್ದು, ಪ್ರಧಾನ ಕಛೇರಿಯವರೆಗೂ ಲಂಚ ತಲುಪಿಸಲಾಗಿದೆ ಎಂದು ಆರೋಪಿಸಿಲಾಗಿದೆ.

SCROLL FOR NEXT