ಕ್ಯಾಮರಾದಲ್ಲಿ ಸೆರೆಯಾದ ಬೀದಿ ನಾಯಿ ದಾಳಿ ಘಟನೆಯ ದೃಶ್ಯ 
ದೇಶ

ಹೈದರಾಬಾದ್: ಬೀದಿ ನಾಯಿಗಳ ದಾಳಿ, 4 ವರ್ಷದ ಮಗು ಸಾವು!

ಬೀದಿ ನಾಯಿಗಳು ಕಚ್ಚಿ, 4 ವರ್ಷಗಳ ಮಗು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್: ಬೀದಿ ನಾಯಿಗಳು ಕಚ್ಚಿ, 4 ವರ್ಷಗಳ ಮಗು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಆತಂಕ ಮೂಡಿಸುವ ವೀಡಿಯೋ ವೈರಲ್ ಆಗತೊಡಗಿದ್ದು, ಆಹಾರ ಪದಾರ್ಥವಿದ್ದ ಪೊಟ್ಟಣ ಕೊಂಡೊಯ್ಯುತ್ತಿದ್ದ ಮಗುವಿನ ಮೇಲೆ ಏಕಾ ಏಕಿ ಬೀದಿ ನಾಯಿಗಳ ಹಿಂಡು ಎರಗಿವೆ ಎಂದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಅಂಬರ್ ಪೇಟ್ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಗು ತಂದೆಯ ಜೊತೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮಗುವಿನ ತಂದೆ ಆಟೋಮೊಬೈಲ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

 ನಾಯಿಗಳಿಂದ ದಾಳಿಗೊಳಗಾದ ಮಗುವಿಗೆ ತೀವ್ರವಾದ ಗಾಯಗಳಾಗಿತ್ತು. ತಂದೆ ಆ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೂ ಆ ವೇಳೆಗೆ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

ಕಳೆದ 2 ದಿನಗಳ ಹಿಂದೆ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕಾಗಿ ನಾಯಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿ 28 ನಾಯಿಗಳನ್ನು ಹಿಡಿಯಲಾಗಿತ್ತು. ಬಹುತೇಕ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆದಿತ್ತು. ಆದ್ದರಿಂದ ನಾಯಿಗಳನ್ನು ಹೊರಗೆ ಬಿಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT