ಗೌತಮ್ ಅದಾನಿ 
ದೇಶ

ಅದಾನಿ ಹಾಗೂ ಸಮೂಹದ ಬಗ್ಗೆ 'ಕೈಗೊಂಬೆಗಳಿಂದ' ತಪ್ಪು ಮಾಹಿತಿ ಸೃಷ್ಟಿ, ತಟಸ್ಥವಲ್ಲದ ಮಾಹಿತಿ ಸೇರ್ಪಡೆ: ವಿಕಿಪಿಡಿಯಾ

ಒಂದು ದಶಕಕ್ಕೂ ಹೆಚ್ಚಿನ ಸಮಯ, ಅದಾನಿ ಕೈಗೊಂಬೆಗಳು-ಕೆಲವರು ಸಂಸ್ಥೆಯ ಉದ್ಯೋಗಿಗಳು ಅದಾನಿ ಹಾಗೂ ಅದಾನಿ ಕುಟುಂಬ, ಅವರ ಪ್ರತಿಯೊಂದು ಉದ್ಯಮದ ಬಗ್ಗೆ ವಿಕಿಪಿಡಿಯಾದಲ್ಲಿ ತಟಸ್ಥವಲ್ಲದ ಮಾಹಿತಿಯನ್ನು ಸೇರಿಸಿ ಹಾಗೂ ಮಾಹಿತಿಯಿಂದ ಎಚ್ಚರಿಕೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ವಿಕಿಪಿಡಿಯಾ ಹೇಳಿದೆ. 

ನವದೆಹಲಿ: ಒಂದು ದಶಕಕ್ಕೂ ಹೆಚ್ಚಿನ ಸಮಯ, ಅದಾನಿ ಕೈಗೊಂಬೆಗಳು-ಕೆಲವರು ಸಂಸ್ಥೆಯ ಉದ್ಯೋಗಿಗಳು ಅದಾನಿ ಹಾಗೂ ಅದಾನಿ ಕುಟುಂಬ, ಅವರ ಪ್ರತಿಯೊಂದು ಉದ್ಯಮದ ಬಗ್ಗೆ ವಿಕಿಪಿಡಿಯಾದಲ್ಲಿ ತಟಸ್ಥವಲ್ಲದ ಮಾಹಿತಿಯನ್ನು ಸೇರಿಸಿ ಹಾಗೂ ಮಾಹಿತಿಯಿಂದ ಎಚ್ಚರಿಕೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ವಿಕಿಪಿಡಿಯಾ ಹೇಳಿದೆ. 

ಒಂದು ತಿಂಗಳ ಅವಧಿಯಲ್ಲಿ ಅದಾನಿ ಸಮೂಹ 70 ಬಿಲಿಯನ್ ಡಾಲರ್ ನಷ್ಟು ಸಂಪತ್ತನ್ನು ಕಳೆದುಕೊಂಡಿದ್ದು, ಜಾಗತಿಕ ಮಟ್ಟದ ಬಿಲಿಯನೇರ್ ಗಳ ಪಟ್ಟಿಯಲ್ಲಿ 25 ನೇ ಸ್ಥಾನಕ್ಕೆ ಇಳಿದಿದ್ದಾರೆ.

ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ಬರ್ಗ್ ಸಂಶೋಧನೆ ಸಂಸ್ಥೆ ಅದಾನಿ ಸಮೂಹದ ವಿರುದ್ಧ ವಂಚನೆ, ಸ್ಟಾಕ್ ಬೆಲೆ ತಿರುಚುವುದು, ಅಕ್ರಮ ಹಣ ವರ್ಗಾವಣೆ ವಿಷಯದಲ್ಲಿ ಗಂಭೀರ ಆರೋಪ ಮಾಡಿತ್ತು.
 
ಫೆ.20 ರಂದು ತಪ್ಪು ಮಾಹಿತಿಯ ವರದಿಯಲ್ಲಿ ವಿಕಿಪಿಡಿಯಾ, ಹಿಂಡನ್ ಬರ್ಗ್ ಆರೋಪಿಸಿದಂತೆ ವಂಚಕನೆಂದು ಉಲ್ಲೇಖಿಸಲಾಗಿರುವ ವ್ಯಕ್ತಿಯ ಬಗ್ಗೆ ಬರೆದಿದ್ದು, ಅದಾನಿ ಹಗೂ ಆತನ ಉದ್ಯೋಗಿಗಳಿಂದ ವಿಕಿಪಿಡಿಯಾ ಓದುಗರನ್ನು ವಿಕಿಪೀಡಿಯಾ ಲೇಖನಗಳ ತಟಸ್ಥವಲ್ಲದ ಸಾರ್ವಜನಿಕ ಸಂಪರ್ಕ ಆವೃತ್ತಿಗಳ ಮೂಲಕ ವಂಚಿಸಲು ಯತ್ನಿಸಿದ್ದರೇ? ಎಂಬ ಪ್ರಶ್ನೆಗೆ ಬಹುತೇಕ ಅವರು ಮಾಡಿದ್ದರು ಎಂದು ಉತ್ತರಿಸಿದೆ.

ಅದಾನಿ ಕುಟುಂಬ, ಕುಟುಂಬ ಉದ್ಯಮಕ್ಕೆ ಸಂಬಂಧಿಸಿದ 9 ಆರ್ಟಿಕಲ್ ಗಳನ್ನು ಸೃಷ್ಟಿಸಿದ ಅಥವಾ ಪರಿಷ್ಕರಿಸಿದ 40 ಕ್ಕೂ ಹೆಚ್ಚು ಅಘೋಷಿತ, ಹಣಪಡೆದು ಎಡಿಟ್ ಮಾಡುವ ವ್ಯಕ್ತಿಗಳನ್ನು ನಿಷೇಧಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಈ ಪೈಕಿ ಹಲವರು ಹಲವು ಲೇಖನಗಳನ್ನು ಎಡಿಟ್ ಮಾಡಿದ್ದರು ಹಾಗೂ ತಟಸ್ಥವಲ್ಲದ ಅಂಶಗಳನ್ನು ಸೇರಿಸಿದ್ದರು ಎಂದು ವಿಕೀಪಿಡಿಯಾ ಹೇಳಿದೆ.
 
ವಿಕಿಪಿಡಿಯಾದಲ್ಲಿ ಯಾವುದೇ ಪೇಜ್ ಹಾಗೂ ಲೇಖನಗಳನ್ನು ಆಕ್ಷಣವೇ ಎಡಿಟ್ ಮಾಡಬಹುದಾಗಿದೆ ಅಥವಾ ಬದಲಾವಣೆ ಮಾಡಲು ಅವಕಾಶವಿದೆ. ಆದರೆ ತಟಸ್ಥ ಮಾಹಿತಿಯನ್ನೊಳಗೊಂಡಿರಬೇಕೆಂಬ ನಿಯಮದಡಿಯಲ್ಲಿ ವಿಕಿಪಿಡಿಯಾ ಕಾರ್ಯನಿರ್ವಹಿಸುತ್ತದೆ.

ಈ ರೀತಿ ಲೇಖನಗಳನ್ನು ಎಡಿಟ್ ಮಾಡುವವರು ಅದಾನಿ ಸಂಸ್ಥೆಯ ನೌಕರರೇ ಆಗಿದ್ದು, ಈ ಪೈಕಿ ಅದಾನಿ ಪತ್ನಿ ಪ್ರೀತಿ, ಪುತ್ರ ಕರಣ್, ಸೋದರಳಿಯ ಪ್ರಣವ್ ಹಾಗೂ ಸಮೂಹ ಸಂಸ್ಥೆಗಳ ವಿರುದ್ಧವೂ ವಿಕಿಪಿಡಿಯಾ ಆರೋಪ ಮಾಡಿದೆ. ವಿಕಿಪಿಡಿಯಾ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಸಮೂಹದ ವಕ್ತಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT