ದೇಶ

ಇಡಿ, ಸಿಬಿಐ ತನಿಖೆ ಎದುರಿಸುತ್ತಿದ್ದ ಉದ್ಯಮಿ ಹಸನ್ ಅಲಿ ಖಾನ್ ಸಾವು

Nagaraja AB

ಹೈದ್ರಾಬಾದ್: ಸ್ವಿಸ್ ಬ್ಯಾಂಕ್ ಗಳಲ್ಲಿ  ಶತಕೋಟಿ ಡಾಲರ್ ಇಟ್ಟ ಆರೋಪ ಹಾಗೂ ಐಟಿ, ಸಿಬಿಐ, ಇಡಿಯಿಂದ ತನಿಖೆ ಎದುರಿಸುತ್ತಿದ್ದ ಪುಣೆ ಮೂಲದ ಉದ್ಯಮಿ ಹಸನ್ ಅಲಿ ಖಾನ್ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿರುವುದಾಗಿ ವಕೀಲರೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಖಾನ್ (71) ಗುರುವಾರ ರಾತ್ರಿ ನಿಧನರಾಗಿದ್ದು, ಶುಕ್ರವಾರ ಬೆಳಗ್ಗೆ ಅವರ ಮೃತದೇಹವನ್ನು ಪುಣೆಗೆ ತರಲಾಯಿತು ಎಂದು ಅವರ ವಕೀಲ ಪ್ರಶಾಂತ್ ಪಾಟೀಲ್ ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಮಾರ್ಚ್ 7, 2011 ರಂದು ಅವರನ್ನು ಬಂಧಿಸಿತ್ತು. ಪುಣೆಯಲ್ಲಿ ಕುದುರೆಗಳ ಫಾರ್ಮ್  ಹೊಂದಿದ್ದ ಉದ್ಯಮಿ, 2015 ರಲ್ಲಿ ಜಾಮೀನು ಪಡೆಯುವ ಮೊದಲು ನಾಲ್ಕು ವರ್ಷಗಳಿಗಿಂತ ಹೆಚ್ಚು ಜೈಲಿನಲ್ಲಿ ಕಳೆದಿದ್ದರು. ಇದಕ್ಕೂ ಮೊದಲು, ಜನವರಿ 2007 ರಲ್ಲಿ ಆದಾಯ ತೆರಿಗೆ ಇಲಾಖೆ ಮುಂಬೈ ಮತ್ತು ಪುಣೆಯಲ್ಲಿರುವ ಅವರ ನಿವಾಸಗಳಲ್ಲಿ ಶೋಧ ನಡೆಸಿದಾಗ ಅವರು ಸುದ್ದಿಯಲ್ಲಿದ್ದರು.

ಜನವರಿ 15, 2007 ರ ವೇಳೆಗೆ ಅವರ ಸ್ವಿಸ್ ಬ್ಯಾಂಕ್ ಖಾತೆಯಿಂದ  8 ಬಿಲಿಯನ್ ಡಾಲರ್ ಹಣ (ಸುಮಾರು 36,000 ಕೋಟಿ ರೂ.) ವರ್ಗಾವಣೆಯಾಗಿದೆ ಎಂದು ಅವರ ನಿವಾಸದಲ್ಲಿ ಪತ್ತೆಯಾದ ದಾಖಲೆಯೊಂದರಲ್ಲಿ ತೋರಿಸಲಾಗಿತ್ತು.  ಖಾನ್ ವಿರುದ್ಧ ಇಡಿ ಪ್ರಕರಣ ದಾಖಲಿಸಿದಾಗ ಆತನ ಬಳಿಯಿದ್ದ ಸುಮಾರು 26.30 ಲಕ್ಷ ನಗದು ವಶಪಡಿಸಿಕೊಂಡಿತ್ತು. 

SCROLL FOR NEXT