ದೇಶ

ಬೆಂಗಳೂರಿನಲ್ಲಿ ಜಿ20 ಹಣಕಾಸು ಸಚಿವರ ಸಭೆ: ಜರ್ಮನಿ ಮತ್ತು ಕೆನಡಾ ಕಡೆಯಿಂದ ಛೀಮಾರಿ; ರಷ್ಯಾ ಅಧಿಕಾರಿಗಳ ಆರೋಪ

Sumana Upadhyaya

ನವದೆಹಲಿ: ಬೆಂಗಳೂರಿನಲ್ಲಿ ನಿನ್ನೆ ಮುಕ್ತಾಯಗೊಂಡ ಜಿ20 ಹಣಕಾಸು ಸಚಿವರ ಸಭೆಯ ಅಧಿವೇಶನವೊಂದರಲ್ಲಿ ತಮ್ಮ ಮೇಲೆ ಛೀಮಾರಿ ಹಾಕಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.

"ನೀವು ಯಾರೆಂದು ನಮಗೆ ತಿಳಿದಿದೆ, ನೀವು ಎಲ್ಲಿ ವಾಸಿಸುತ್ತೀರಿ ನಿಮ್ಮನ್ನು ಎಲ್ಲಿ ಹುಡುಕಬೇಕು ಮತ್ತು ಉಕ್ರೇನ್‌ನಲ್ಲಿನ ಸಂಘರ್ಷಕ್ಕೆ ನೀವು ವೈಯಕ್ತಿಕವಾಗಿ ಜವಾಬ್ದಾರರಾಗಿದ್ದೀರಿ ಎಂಬುದನ್ನು ನಾವು ಮರೆಯುವುದಿಲ್ಲ" ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದು, ಸಭೆಯ ಅಧಿವೇಶನವೊಂದರಲ್ಲಿ ಜರ್ಮನಿ ಮತ್ತು ಕೆನಡಾದವರು ಈ ರೀತಿ ಛೀಮಾರಿ ಹಾಕಿದ್ದಾರೆ ಎಂದರು. 

ಕೆನಡಾದ ಕಡೆಯಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ, ಆದರೆ ಜರ್ಮನ್ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. 

"ಪಾಶ್ಚಿಮಾತ್ಯರು ಶಾಂತಿಯ ಬಗ್ಗೆ ಮಾತನಾಡುವಾಗ, ಅವರು ಇತರರೊಂದಿಗೆ ಮಾತನಾಡುವ ರೀತಿಯಲ್ಲಿ ಸ್ವಲ್ಪ ಹೆಚ್ಚು ಜವಾಬ್ದಾರರಾಗಿರಬೇಕು. ಇಂತಹ ಉನ್ನತ ಮಟ್ಟದ ಘಟನೆಯಲ್ಲಿ ಬೆದರಿಕೆಯಂತೆ ತೋರುವ ಈ ರೀತಿಯ ಮಾತುಗಳನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ. 

ಭಾರತವು ತನ್ನ G20 ಪ್ರೆಸಿಡೆನ್ಸಿ ಅಡಿಯಲ್ಲಿ ಆಯೋಜಿಸುತ್ತಿರುವ ಪೂರ್ವ ಸಿದ್ಧತೆ ಸಭೆಯಲ್ಲಿ ಹಿಂದಿನ ಘಟನೆಗಳಲ್ಲಿ ಅಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ. ಮಾರ್ಚ್ 1 ಮತ್ತು 2 ರಂದು ದೆಹಲಿಯಲ್ಲಿ ನಡೆಯಲಿರುವ ಜಿ 20 ವಿದೇಶಾಂಗ ಮಂತ್ರಿಗಳ ಸಭೆಯು ಉನ್ನತ ಮಟ್ಟದ್ದಾಗಿದ್ದು. ಈ ಸಮಾರಂಭದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾಗವಹಿಸುವ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಕೂಡ ಭಾಗವಹಿಸಲಿದ್ದಾರೆ.

ನಿನ್ನೆ ಬ್ಲಿಂಕನ್ ಅಟ್ಲಾಂಟಿಕ್‌ಗೆ ನೀಡಿದ ಸಂದರ್ಶನದಲ್ಲಿ ಇತರ ರಾಷ್ಟ್ರಗಳ ನಡುವೆ ಭಾರತವು ರಷ್ಯಾದೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವ ಪ್ರಭಾವವನ್ನು ಹೊಂದಿದೆ ಎಂದು ಹೇಳಿದ್ದರು ಮತ್ತು ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ಮಾಸ್ಕೋವನ್ನು ಮನವೊಲಿಸಲು ಚೀನಾದೊಂದಿಗೆ ಭಾರತವನ್ನು ಒತ್ತಾಯಿಸಿದರು. 

SCROLL FOR NEXT