ಮೆಟ್ರೋ ನಿಲ್ದಾಣದಲ್ಲಿ ಮಡಚಬಹುದಾದ ಸೈಕಲ್ 
ದೇಶ

ಮೆಟ್ರೋ: ಇನ್ನೂ ಜನಪ್ರಿಯವಾಗಬೇಕಿದೆ ಪಾಸ್ ಸೌಲಭ್ಯ, ಮಡಚಬಹುದಾದ ಸೈಕಲ್ ವ್ಯವಸ್ಥೆ

ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಂಡಿರುವ ಮೆಟ್ರೋ, ನಿರ್ದಿಷ್ಟ ದಿನಗಳಿಗೆ ಪ್ರಯಾಣಿಕ ಪಾಸ್ ಹಾಗೂ  ಮಡಚಬಹುದಾದ ಸೈಕಲ್ ಗಳನ್ನು ಮೆಟ್ರೋ ಒಳಗೆ ತೆಗೆದುಕೊಂಡು ಹೋಗುವ ಸೌಲಭ್ಯಗಳನ್ನು ಕಲ್ಪಿಸಿದೆ. 

ಬೆಂಗಳೂರು: ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಂಡಿರುವ ಮೆಟ್ರೋ, ನಿರ್ದಿಷ್ಟ ದಿನಗಳಿಗೆ ಪ್ರಯಾಣಿಕ ಪಾಸ್ ಹಾಗೂ ಮಡಚಬಹುದಾದ ಸೈಕಲ್ ಗಳನ್ನು ಮೆಟ್ರೋ ಒಳಗೆ ತೆಗೆದುಕೊಂಡು ಹೋಗುವ ಸೌಲಭ್ಯಗಳನ್ನು ಕಲ್ಪಿಸಿದೆ. 

ಬಿಎಂಆರ್ ಸಿಎಲ್ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಸರಾಸರಿ ದಿನವೊಂದಕ್ಕೆ 5.5 ಲಕ್ಷ ಪ್ರಯಾಣಿಕರ ಪೈಕಿ ಕೇವಲ 40,880 ಮಂದಿಯಷ್ಟೇ 9 ತಿಂಗಳಲ್ಲಿ ಪಾಸ್ ಗಳ ಸೌಲಭ್ಯವನ್ನು ಪಡೆದಿದ್ದಾರೆ.  ಬಿಎಂಆರ್ ಸಿಎಲ್ ಏಪ್ರಿಲ್. 2, 2022 ರಂದು ಪಾಸ್ ಗಳನ್ನು ಪರಿಚಯಿಸಿತ್ತು. 

ಒಂದು ದಿನದ ಪಾಸ್ ಗೆ 150 ರೂಪಾಯಿ ವೆಚ್ಚವಾದರೆ, ಮೂರು ದಿನದ ಪಾಸ್ ಗೆ 350 ರೂಪಾಯಿ ವೆಚ್ಚವಾಗಲಿದೆ.
 
ಬಿಎಂಆರ್ ಸಿಎಲ್ ನ ಕಾರ್ಯನಿರ್ವಹಣೆ ಹಾಗೂ ನಿರ್ವಹಣೆಯ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ, ಎಎಸ್ ಶಂಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ಏ.2 ರಿಂದ ಡಿ.28 ರ ವರೆಗೂ ಒಟ್ಟು 38,074 ಪ್ರಯಾಣಿಕರು 1 ದಿನದ ಪಾಸ್ ಖರೀದಿಸಿದ್ದರೆ, 1972 ಪ್ರಯಾಣಿಕರು ಮೂರು ದಿನದ ಪಾಸ್ ನ್ನು ಖರೀದಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೇ ತಿಂಗಳಲ್ಲಿ ಬಿಎಂಆರ್ ಸಿಎಲ್ 550 ರೂಪಾಯಿಗಳಿಗೆ 5 ದಿನದ ಪಾಸ್ ನ್ನು ಪರಿಚಯಿಸಿತ್ತು. ಈ ಪಾಸ್ ನ್ನು 834 ಮಂದಿ ಖರೀದಿಸಿದ್ದರು. ಇದಕ್ಕಾಗಿ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ನ್ನು ಪಡೆದು 50 ರೂಪಾಯಿ ಹೆಚ್ಚುವರಿ ಪಾವತಿಸಬೇಕಿದ್ದು ಈ ಮೊತ್ತವನ್ನು ವಾಪಸ್ ಪಡೆಯುವ ಅವಕಾಶವಿರಲಿದೆ. 

ನಿರ್ದಿಷ್ಟ ಅವಧಿಗೆ ಅನಿಯಮಿತ ಪ್ರಯಾಣಕ್ಕೆ ಅವಕಾಶ ನೀಡುವ ಪಾಸ್ ಗಳನ್ನು ಜನತೆ ಹೆಚ್ಚು ಖರೀದಿಸದೇ ಇರಲು ಕಾರಣ ಇನ್ನೂ ತಿಳಿದಿಲ್ಲ. ಈ ಸೌಲಭ್ಯದ ಬಗ್ಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪೋಸ್ಟರ್ ಹಾಗೂ ಜಾಹಿರಾತುಗಳನ್ನು ಪ್ರಕಟಿಸಲಾಗಿದೆ.
 
ಬೈಸಿಕಲ್ ಗಳಿಗಾಗಿ ಪ್ರತ್ಯೇಕ ಸ್ಕ್ಯಾನಿಂಗ್ ವ್ಯವಸ್ಥೆ 

ಸೈಕ್ಲಿಂಗ್ ನ್ನು ಹೆಚ್ಚು ಪರಿಗಣಿಸುವ ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಮೆಟ್ರೋ ಒಳಗೆ ಮಡಚಬಹುದಾದ ಸೈಕಲ್ ಗಳನ್ನು ಕೊಂಡೊಯ್ಯುವುದಕ್ಕೆ ಜೂ.07, 2022 ರಿಂದ ಅನುಮತಿ ನೀಡಲಾಗಿದೆ.  ಆದರೆ ಈ ಪರಿಸರ ಸ್ನೇಹಿ ವ್ಯವಸ್ಥೆಯನ್ನು ಕೇವಲ ಒಂದಷ್ಟು ಮಂದಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಬಿಎಂಆರ್ ಸಿಎಲ್ ನ ನಿಯಮಗಳ ಪ್ರಕಾರ, ಮೆಟ್ರೋ ಒಳಗೆ ಕೊಂಡೊಯ್ಯಬಹುದಾಗಿರುವ ಬೈಸಿಕಲ್ ನ ತೂಕ 15 ಕೆ.ಜಿಗಿಂತಲೂ ಹೆಚ್ಚು ಇರುವಂತಿಲ್ಲ ಹಾಗೂ 60 cm x 45 cm x 25 cm ಅಳತೆಯನ್ನು ಮೀರುವಂತಿಲ್ಲ.
 
ಬ್ರಾಂಪ್ಟನ್ (1 ಲಕ್ಷ ರೂಪಾಯಿ) ಬ್ರಾಂಡ್ ನ ಬೈಸಿಕಲ್ ಗಳು ಮಾತ್ರವೇ ಮೆಟ್ರೋ ಬ್ಯಾಗೇಜ್ ಸ್ಕ್ಯಾನರ್ ಮೂಲಕ ಹಾದು ಹೋಗುವ ಸಾಮರ್ಥ್ಯ ಹೊಂದಿದ್ದು, ಬೇರೆ ಬ್ರಾಂಡ್ ಗಳ ಬೈಸಿಕಲ್ ಗಳು ಲಗೇಜ್ ಸ್ಕ್ಯಾನರ್ ಮೂಲಕ ಹಾದುಹೋಗುವುದಿಲ್ಲ.
 
ಇದೂ ಸಹ ಅನನುಕೂಲವಾಗಿದ್ದು, ಮುಂದಿನ ದಿನಗಳಲ್ಲಿ ಮಡಚಬಹುದಾದ ಎಲ್ಲಾ ಬೈಸಿಕಲ್ ಗಳು ಸ್ಕ್ಯಾನರ್ ಮೂಲಕ ಹಾದು ಹೋಗುವ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್