ದೇಶ

ಮೂರು ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಜಗನ್ ಮೋಹನ್ ರೆಡ್ಡಿ ಸರ್ಕಾರವೇ ಹೊಣೆ; ಟಿಡಿಪಿ ಆರೋಪ

Ramyashree GN

ಅಮರಾವತಿ: ಭಾನುವಾರ ರಾತ್ರಿ ಗುಂಟೂರು ನಗರದಲ್ಲಿ ನಡೆದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ  ಘಟನೆಗೆ ಆಂಧ್ರಪ್ರದೇಶ ಸರ್ಕಾರವೇ ಹೊಣೆ ಎಂದು ತೆಲುಗು ದೇಶಂ ಪಕ್ಷವು (ಟಿಡಿಪಿ) ಆರೋಪಿಸಿದ್ದು, ದುರಂತದ ಬಗ್ಗೆ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ.

ನಾಯ್ಡು ಅವರು ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರೆ, ರಾಜ್ಯ ಸರ್ಕಾರ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಟಿಡಿಪಿ ಮುಖಂಡ ಕೆ.ರವೀಂದ್ರ ತಿಳಿಸಿದ್ದಾರೆ. ಮತ್ತೊಬ್ಬ ಟಿಡಿಪಿ ನಾಯಕ ಮನ್ನವ ಮೋಹನ ಕೃಷ್ಣ ಮೃತರ ಕುಟುಂಬಕ್ಕೆ ತಲಾ ಮೂರು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಗುಂಟೂರಿನ ಸಾರ್ವಜನಿಕ ಮೈದಾನದಲ್ಲಿ ಸರ್ಕಾರೇತರ ಸಂಸ್ಥೆಯು ಬಡ ಕುಟುಂಬಗಳಿಗೆ 'ಸಂಕ್ರಾಂತಿ ಕಣ' (ಉಡುಗೊರೆ) ವಿತರಿಸಿಸುತ್ತಿದ್ದ ಕೆಲವು ಸ್ಟಾಲ್‌ಗಳಲ್ಲಿ ಉಂಟಾದ ನೂಕು ನುಗ್ಗಲಿನಲ್ಲಿ ಕಾಲ್ತುಳಿತದಿಂದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಡಿಪಿ ಅಧ್ಯಕ್ಷರು ಸ್ಥಳದಿಂದ ನಿರ್ಗಮಿಸಿದ ಕೆಲವೇ ನಿಮಿಷಗಳ ನಂತರ ದುರಂತ ಸಂಭವಿಸಿದೆ.

ಈ ದುರಂತ ಘಟನೆಗೆ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವುದೇ ಕಾರಣ ಎಂದು ಟಿಡಿಪಿ ರಾಜ್ಯಾಧ್ಯಕ್ಷ ಕೆ ಅಚ್ಚಂನಾಯ್ಡು ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರೊಬ್ಬರು ಕಾರ್ಯಕ್ರಮಕ್ಕೆ ಹಾಜರಾಗುವ ಸ್ಥಳದಲ್ಲಿ ಸಾಕಷ್ಟು ಭದ್ರತೆ ಮತ್ತು ಸರಿಯಾದ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಖಚಿತಪಡಿಸಿಕೊಳ್ಳುವುದು ಪೊಲೀಸರ ಜವಾಬ್ದಾರಿಯಲ್ಲವೇ? ಜಗನ್ ಆಡಳಿತವು ತನ್ನ ಆರೋಪಗಳ ಆಟವನ್ನು ನಡೆಸಲು ಜನರ ಜೀವನವನ್ನು ಪಣಕ್ಕಿಡುತ್ತಿರುವಂತೆ ತೋರುತ್ತಿದೆ ಎಂದು ಅಚ್ಚಂನಾಯ್ಡು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ದುರಂತ ಘಟನೆಯ ನಂತರ ಕೆಲವು ಸಚಿವರ ಪ್ರತಿಕ್ರಿಯೆ ಮತ್ತು ವೈಎಸ್ಆರ್ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕೆಟ್ಟ ಪ್ರಚಾರವು ಆಡಳಿತದ ದುಷ್ಟ ವಿನ್ಯಾಸಗಳ ಬಗ್ಗೆ ಅನುಮಾನವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.

ನಾಯ್ಡು ಅವರು ಪ್ರತ್ಯೇಕ ಹೇಳಿಕೆಯಲ್ಲಿ, 'ಇದು ಅತ್ಯಂತ ದುರದೃಷ್ಟಕರ. ಬಡವರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಸ್ವಯಂಸೇವಾ ಸಂಸ್ಥೆಯನ್ನು ಪ್ರೋತ್ಸಾಹಿಸಲು ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇದು ದುರಂತದಲ್ಲಿ ಕೊನೆಗೊಂಡಿದ್ದಕ್ಕೆ ನನಗೆ ಅತೀವ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

SCROLL FOR NEXT