ದೇಶ

ಸಿನಿಮಾ ಥಿಯೇಟರ್ ಒಳಗೆ ಹೊರಗಿನ ತಿಂಡಿ-ತಿನಿಸುಗಳಿಗೆ ನಿಷೇಧ ಹೇರಬಹುದು, ಆದರೆ ನೀರು ನೀವೇ ಕೊಡಿ: ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ಆಹಾರ ಮತ್ತು ಪಾನೀಯಗಳ ಮಾರಾಟಕ್ಕೆ ಷರತ್ತುಗಳನ್ನು ನಿಗದಿಪಡಿಸುವ ಹಕ್ಕು ಸಿನಿಮಾ ಮಂದಿರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಪೀಠ ತೀರ್ಪು ನೀಡಿದೆ.

ಸಿನಿಮಾ ಥಿಯೇಟರ್ ಆಸ್ತಿಯು ಚಿತ್ರಮಂದಿರ ಮಾಲೀಕರ ಖಾಸಗಿ ಆಸ್ತಿ. ಅಂತಹ ನಿಯಮಗಳು ಮತ್ತು ಷರತ್ತುಗಳು ಸಾರ್ವಜನಿಕ ಹಿತಾಸಕ್ತಿ, ಸುರಕ್ಷತೆ ಮತ್ತು ಕಲ್ಯಾಣಕ್ಕೆ ವಿರುದ್ಧವಾಗಿಲ್ಲದಿರುವವರೆಗೆ ನಿಯಮಗಳು ಮತ್ತು ಷರತ್ತುಗಳನ್ನು ಹೇರಲು ಮಾಲೀಕರು ಅರ್ಹರಾಗಿರುತ್ತಾರೆ. ಆಹಾರ ಮತ್ತು ಪಾನೀಯಗಳ ಮಾರಾಟದ ನಿಯಮಗಳನ್ನು ತರಲು ಮಾಲೀಕರು ಅರ್ಹರಾಗಿರುತ್ತಾರೆ.

ಚಲನಚಿತ್ರ ವೀಕ್ಷಕರಿಗೆ ಅದನ್ನು ಖರೀದಿಸದಿರಲು ಆಯ್ಕೆ ಇದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ನೇತೃತ್ವದ ನ್ಯಾಯಪೀಠ ಹೇಳಿದೆ.

ಆದರೆ, ಚಿತ್ರಮಂದಿರಗಳು ಉಚಿತ ನೈರ್ಮಲ್ಯ ಕುಡಿಯುವ ನೀರನ್ನು ಒದಗಿಸಬೇಕು. ಅಲ್ಲದೆ, ಶಿಶುಗಳಿಗೆ ಪೋಷಕರು ಒಯ್ಯುವ ಸಮಂಜಸ ಪ್ರಮಾಣದ ಆಹಾರವನ್ನು ಒಳಗೆ ತೆಗೆದುಕೊಂಡು ಹೋಗಲು ಅವರು ಆಕ್ಷೇಪಿಸುವಂತಿಲ್ಲ ಎಂದು ಪೀಠ ಹೇಳಿದೆ.

ಸಿನಿಮಾ ಹಾಲ್ ಖಾಸಗಿ ಆಸ್ತಿ. ಶಾಸನಬದ್ಧ ನಿಯಮಗಳಿಗೆ ಒಳಪಟ್ಟು ಆಸ್ತಿಯ ಮಾಲೀಕರು ಸ್ವಂತ ನಿರ್ಧಾರ ಕೈಗೊಳ್ಳಬಹುದು.

ಸಿನಿಮಾ ಹಾಲ್ ಒಳಗೆ ಆಯುಧಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ. ಜಾತಿ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡಬಾರದು. ಸಿನಿಮಾ ಹಾಲ್‌ಗಳಿಗೆ ಯಾವುದೇ ಆಹಾರವನ್ನು ತರಬಹುದು ಎಂದು ಹೈಕೋರ್ಟ್ ಹೇಗೆ ಹೇಳುತ್ತದೆ ಎಂದು ಸಿಜೆಐ ಹೇಳಿದರು.

ಸಿನಿಮಾ ಹಾಲ್‌ಗಳು/ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಸಿನಿಮಾ ಪ್ರೇಕ್ಷಕರು ತಮ್ಮದೇ ಆದ ಆಹಾರ ಮತ್ತು ನೀರನ್ನು ಥಿಯೇಟರ್‌ಗೆ ಕೊಂಡೊಯ್ಯುವುದನ್ನು ನಿಷೇಧಿಸಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಆದೇಶದ ವಿರುದ್ಧದ ಮನವಿಯನ್ನು ಪರಿಗಣಿಸುವಾಗ ನ್ಯಾಯಾಲಯದ ಅವಲೋಕನ ಬಂದಿದೆ. 

ಪ್ರವೇಶದ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ ಎಂದು ಸೂಚಿಸಿದ ಸುಪ್ರೀಂ ಕೋರ್ಟ್, ಯಾರಾದರೂ ಜಿಲೇಬಿಯನ್ನು ಸಿನಿಮಾ ಹಾಲ್ ಒಳಗೆ ತೆಗೆದುಕೊಂಡು ಹೋಗಿ ಕೂತಿರುವ ಸೀಟಿನ ಮೇಲೆ ಉಜ್ಜಿ ಗಲೀಜು ಮಾಡಲು ಯಾರೂ ಬಯಸುವುದಿಲ್ಲ, ತಂದೂರಿ ಚಿಕನ್ ಖರೀದಿಸಲು ಅವರು ಬಯಸುವುದಿಲ್ಲ . ಹೊರಗಿನ ಆಹಾರವಿಲ್ಲ ಎಂದು ಟಿಕೆಟ್‌ಗೆ ಷರತ್ತು ಇದ್ದರೆ, ಅದು ಕಟ್ಟಿಹಾಕಿದಂತೆ ಮಾಡುತ್ತದೆ, ಪ್ರವೇಶದ ಹಕ್ಕುಗಳು ಯಾವಾಗಲೂ ಕಾಯ್ದಿರಿಸಲಾಗುತ್ತದೆ ಎಂದರು.

SCROLL FOR NEXT