ದೇಶ

ಲೂಧಿಯಾನ ಕೋರ್ಟ್ ಸ್ಫೋಟ:  ಪಾಕ್ ಪ್ರಜೆ ಸೇರಿದಂತೆ ಐವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

Nagaraja AB

ಲೂಧಿಯಾನ: 2021ರ ಡಿಸೆಂಬರ್‌ನಲ್ಲಿ ಲೂಧಿಯಾನ ನ್ಯಾಯಾಲಯದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಿ ಪ್ರಜೆ ಸೇರಿದಂತೆ ಐವರ ವಿರುದ್ಧ ಎನ್ ಐಎ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಈ ಸ್ಫೋಟದಲ್ಲಿ ಶಂಕಿತ ಉಗ್ರ ಸಾವನ್ನಪ್ಪಿದ್ದ, ಇತರ ಆರು ನಾಗರಿಕರು ಗಾಯಗೊಂಡಿದ್ದರು.  ಪಂಜಾಬ್‌ನ ಮೊಹಾಲಿಯ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ ಆರೋಪಪಟ್ಟಿ ಸಲ್ಲಿಸಿದೆ ಎಂದು  ವಕ್ತಾರರು ತಿಳಿಸಿದ್ದಾರೆ.

ಈ ಸ್ಫೋಟ ಸಂಬಂಧ ಆರಂಭದಲ್ಲಿ  ಪಂಜಾಬಿನ ಲೂಧಿಯಾನ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಜನವರಿ 13, 2022ರಲ್ಲಿ ಎನ್ ಐಎ ಮತ್ತೆ ಕೇಸ್ ದಾಖಲಿಸಿತ್ತು.

ತನಿಖೆ ವೇಳೆ ಪಾಕಿಸ್ತಾನ ಮೂಲದ ಅಂತಾರಾಷ್ಟ್ರೀಯ ಸಿಖ್ ಯೂತ್ ಫೆಡರೇಷನ್ ಮತ್ತು ಖಲಿಸ್ತಾನ್ ಪ್ರತ್ಯೇಕ ಪಡೆಯ ಉಗ್ರರು ಪಂಜಾಬ್ ನ ವಿವಿಧ ಕಡೆಗಳಲ್ಲಿ ಐಇಡಿ ಸ್ಫೋಟಿಸಲು ಸಂಚು ರೂಪಿಸಿದ್ದ ಲಕ್ಬಿರ್ ಸಿಂಗ್ ರೋಡ್ ನನ್ನು ನಿರ್ವಹಿಸುತ್ತಿದ್ದರು.

ಸಂಚನ್ನು ಕಾರ್ಯಗತಗೊಳಿಸಲು ಪಾಕಿಸ್ತಾನ ಮೂಲದ ಕಳ್ಳ ಸಾಗಣೆದಾರರೊಂದಿಗೆ ಸಂಪರ್ಕದಲ್ಲಿದ್ದು, ಸ್ಫೋಟಕಗಳ ಕಳ್ಳಸಾಗಣೆ ಮತ್ತು ಸ್ಫೋಟಿಸಿಲು ಭಾರತೀಯ ಮೂಲದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT