ದೇಶ

ಜಮ್ಮು-ಕಾಶ್ಮೀರ: ಸುಧಾರಿತ ಸ್ಫೋಟಕ ಸಾಧನ ವಶ, ತಪ್ಪಿದ ಭಾರಿ ದುರಂತ!

Nagaraja AB

ರಜೌರಿ: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಸಮಯಕ್ಕೆ ಸರಿಯಾಗಿ ಪ್ರಬಲವಾದ ಸುಧಾರಿತ ಸ್ಫೋಟಕ ಸಾಧನವನ್ನು( ಐಇಡಿ) ನಿಷ್ಕ್ರೀಯಗೊಳಿಸಿದ್ದರಿಂದ ಭಾನುವಾರ ಸಂಜೆ ಸಂಭಾವ್ಯ ದೊಡ್ಡ ದುರಂತವೊಂದು ತಪ್ಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧಾಲ್ ಪ್ರದೇಶದ ದಂಡೋಟೆ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ವೇಳೆ ಐಇಡಿ ಪತ್ತೆಯಾಗಿದ್ದು, ಕೂಡಲೇ ಅದನ್ನು ನಿಷ್ಕ್ರೀಯಗೊಳಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಧಂಗ್ರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ನಾಗರಿಕರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದರು. ಈ ದಾಳಿ ಬಳಿಕ ರಜೌರಿಯಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಶೋಧ ಕಾರ್ಯಾಚರಣೆ ವೇಳೆ ಐಇಡಿ ನಿಷ್ಕ್ರೀಯಗೊಳಿಸಿರುವುದನ್ನು ರಜೌರಿ ಹಿರಿಯ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಸ್ಲಾಮ್ ದೃಢಪಡಿಸಿದ್ದಾರೆ.  ಬಾಂಬ್ ನಿಷ್ಕ್ರಿಯ ದಳದ ತಜ್ಞರು ಸ್ಫೋಟ ಸಂಭವಿಸದಂತೆ ಐಇಡಿಯನ್ನು ನಿಷ್ಕ್ರೀಯಗೊಳಿಸಿದ್ದಾಗಿ ಅವರು ಹೇಳಿದ್ದಾರೆ. 

SCROLL FOR NEXT