ಸಂಸದ ವರುಣ್ ಗಾಂಧಿ 
ದೇಶ

1 ಕೋಟಿ ಸರ್ಕಾರಿ ಹುದ್ದೆಗಳು ಖಾಲಿ: ಬಿಜೆಪಿ ಸಂಸದ ವರುಣ್ ಗಾಂಧಿ

ದೇಶದಲ್ಲಿನ ನಿರುದ್ಯೋಗ ಕುರಿತು ಧ್ವನಿ ಎತ್ತಿರುವ ಬಿಜೆಪಿ ಸಂಸದ ವರುಣ್ ಗಾಂಧಿ, 1 ಕೋಟಿ ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಕೂಡಲೇ ಅವುಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪಿಲಿಬಿತ್: ದೇಶದಲ್ಲಿನ ನಿರುದ್ಯೋಗ ಕುರಿತು ಧ್ವನಿ ಎತ್ತಿರುವ ಬಿಜೆಪಿ ಸಂಸದ ವರುಣ್ ಗಾಂಧಿ, 1 ಕೋಟಿ ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಕೂಡಲೇ ಅವುಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬೆಹೆರಿ ವಿಧಾನಸಭಾ ಕ್ಷೇತ್ರದ ಅರ್ಸಿಯಾಬೊಜ್ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ವರುಣ್ ಗಾಂಧಿ, ಖಾಲಿ ಹುದ್ದೆಗಳ ಭರ್ತಿಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದರು.

ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೂಡಲೇ ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಬೇಕು, ಇಲ್ಲವೇ ಪ್ರತಿಭಟನೆ ಎದುರಿಸಲು ಸಿದ್ಧರಾಗುವಂತೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಬಿಡಾಡಿ ಜಾನುವಾರುಗಳಿಂದ ಬೆಳೆ ಹಾನಿ ಕುರಿತು ಪ್ರತಿಕ್ರಿಯಿಸಿದ ಸಂಸದರು, ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಈ ಸಮಸ್ಯೆಯನ್ನು ಪರಿಹರಿಸುವಂತೆ ಸೂಚನೆ ನೀಡಿದರು. ಪೊಲೀಸ್ ದೌರ್ಜನ್ಯ ಬಗ್ಗೆ ಅನೇಕ ದೂರುಗಳು ಬರುತ್ತಿರುವುದಾಗಿ ಅವರು ತಿಳಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಹಿತಾಸಕ್ತಿಯನ್ನು ಮಾರಾಟ ಮಾಡಬೇಡಿ: ರಾಹುಲ್ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಆಗ್ರಹ

ಪವರ್​ಫುಲ್ ಮ್ಯಾನ್ ಯತೀಂದ್ರ ನಮ್ಮ ಹೈಕಮಾಂಡ್ -ಗಣಿಗ ರವಿ: ಖರ್ಗೆ ಒಗ್ಗಟ್ಟಿನ ಪಾಠಕ್ಕೂ ಡೋಂಟ್ ಕೇರ್; ಇಮ್ಮಡಿಯಾದ ಕಾಂಗ್ರೆಸ್ ಬಣ ಬಡಿದಾಟ!

T20 ವಿಶ್ವಕಪ್ 2026: ಮುಜುಗರ ತಪ್ಪಿಸಿಕೊಳ್ಳಲು ಪಂದ್ಯ ಮುಕ್ತಾಯಕ್ಕೂ ಮೊದಲೇ ಮೈದಾನದಿಂದ ಕಾಲ್ಕಿತ್ತ Mohsin Naqvi!

'2048 ಬಂದ್ರೂ ಡಿಕೆ ಶಿವಕುಮಾರ್ ಸಿಎಂ ಆಗಲ್ಲ: ಏಕಂದ್ರೆ ನಾವು ಬಿಡಲ್ಲ; ಇನ್ನು ಮುಂದೆ ದೇಶವೂ ನಮ್ಮದೇ, ರಾಜ್ಯವೂ ನಮ್ಮದೇ'

4 ಕೋಟಿ ರೂ. ಮೌಲ್ಯದ ಗ್ರಾಹಕರ ಚಿನ್ನಾಭರಣ ಕದ್ದು, ಆನ್‌ಲೈನ್ ಬೆಟ್ಟಿಂಗ್‌: ಬ್ಯಾಂಕ್ ಮ್ಯಾನೇಜರ್ ಬಂಧನ, ಸಿಕ್ಕಿಬಿದ್ದಿದ್ದೇ ರೋಚಕ!

SCROLL FOR NEXT