ಕಾನ್ಪುರ ಐಐಟಿ ಜಿಯೋಲಾಜಿಕಲ್ ರಿಸರ್ಚ್‌ನ ತಂಡದ ಮುಖ್ಯಸ್ಥ ಪ್ರೊ.ರಾಜೀವ್ ಸಿನ್ಹಾ 
ದೇಶ

ಮಳೆ ಅಥವಾ ಭೂಕಂಪ ಜೋಶಿಮಠದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು: ಐಐಟಿ ತಜ್ಞರ ಎಚ್ಚರಿಕೆ

ಭೂಕುಸಿತದಿಂದ ಪ್ರಭಾವಿತವಾಗಿರುವ ಜೋಶಿಮಠದ ಸಮೀಪವಿರುವ ಮೇಲ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಕಾನ್ಪುರ ಐಐಟಿ ಜಿಯೋಲಾಜಿಕಲ್ ರಿಸರ್ಚ್‌ನ ತಂಡದ ಮುಖ್ಯಸ್ಥ ಪ್ರೊ.ರಾಜೀವ್ ಸಿನ್ಹಾ ಅವರು, ಒಂದು ವೇಳೆ ಮಳೆ ಅಥವಾ ಭೂಕಂಪ ಉಂಟಾದರೆ ಜೋಶಿಮಠದ ಪರಿಸ್ಥಿತಿಯು ಇನ್ನಷ್ಟು ಹದಗೆಡಬಹುದು ಎಂದು ಹೇಳಿದರು.

ಕಾನ್ಪುರ: ಭೂಕುಸಿತದಿಂದ ಪ್ರಭಾವಿತವಾಗಿರುವ ಜೋಶಿಮಠದ ಸಮೀಪವಿರುವ ಮೇಲ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಕಾನ್ಪುರ ಐಐಟಿ ಜಿಯೋಲಾಜಿಕಲ್ ರಿಸರ್ಚ್‌ನ ತಂಡದ ಮುಖ್ಯಸ್ಥ ಪ್ರೊ.ರಾಜೀವ್ ಸಿನ್ಹಾ ಅವರು, ಒಂದು ವೇಳೆ ಮಳೆ ಅಥವಾ ಭೂಕಂಪ ಉಂಟಾದರೆ ಜೋಶಿಮಠದ ಪರಿಸ್ಥಿತಿಯು ಇನ್ನಷ್ಟು ಹದಗೆಡಬಹುದು ಎಂದು ಹೇಳಿದರು.

ಬಿರುಕುಗಳು ಮತ್ತು ವಿನಾಶವು ಮೊದಲೇ ಪ್ರಾರಂಭವಾಗಿದ್ದವು. ಇದು ಚಳಿಗಾಲದ ಕಾಲ. ಆದರೆ, ಈ ಪ್ರದೇಶದಲ್ಲಿ ಇಲ್ಲಿ ಮಳೆ ಅಥವಾ ಭೂಕಂಪ ಸಂಭವಿಸಿದರೆ, ಪರಿಸ್ಥಿತಿ ನಿಯಂತ್ರಣ ತಪ್ಪುತ್ತದೆ ಎಂದು ಪ್ರೊ ಸಿನ್ಹಾ ಹೇಳಿದರು.

ಜೋಶಿಮಠದ ಇಂದಿನ ದುರಂತದ ಹಿಂದಿನ ಮೂರು ಪ್ರಮುಖ ಕಾರಣಗಳನ್ನು ತಿಳಿಸಿರುವ ಅವರು, 'ಮೊದಲನೆಯದಾಗಿ, ಇದು ಸಕ್ರಿಯ ವಲಯವಾಗಿದೆ ಮತ್ತು ವಲಯ 5 ರಲ್ಲಿ ಬರುತ್ತದೆ. ಎರಡನೆಯದಾಗಿ, ಈ ಪ್ರದೇಶವು ಭೂಕಂಪ ಮತ್ತು ಭೂಕುಸಿತಕ್ಕೆ ಒಳಗಾಗುತ್ತದೆ. ಮೂರನೆಯದಾಗಿ, ಇಡೀ ಪ್ರದೇಶವನ್ನು ಹಳೆಯ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಹೀಗಾಗಿ, ಭೂಕುಸಿತ ಮತ್ತು ಅದರ ನಂತರ ಯಾವುದೇ ಅಭಿವೃದ್ಧಿ ಸಂಭವಿಸಿದರೂ, ಮನೆಗಳ ಅಡಿಪಾಯವನ್ನು ಯೋಜಿಸಿಲ್ಲ ಮತ್ತು ಅವುಗಳನ್ನು ಬೃಹದಾಕಾರದ ರೀತಿಯಲ್ಲಿ ನಿರ್ಮಿಸಲಾಗಿದೆ ಎಂದಿದ್ದಾರೆ.

ಕಲ್ಲುಗಳ ಬಿರುಕುಗಳ ನಡುವೆ ನೀರಿನ ಹರಿವು ಹೆಚ್ಚಾಗುತ್ತಿದ್ದು, ನೀರಿನ ಹರಿವಿನ ಒತ್ತಡವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದರು.

ಐಐಟಿಯ ಸಮೀಕ್ಷಾ ತಂಡವು ಅಲಕಾನಂದ ಮತ್ತು ಧೌಲಿಗಂಗಾ ಬಳಿ ಸಮೀಕ್ಷೆ ನಡೆಸಿದೆ.

ಎರಡು ವರ್ಷಗಳಿಂದ ಎನ್‌ಟಿಪಿಸಿ ಸ್ಥಾವರಕ್ಕಾಗಿ ಅಲಕಾನಂದ ಮತ್ತು ಧೌಳಿಗಂಗಾ ಬಳಿ ಸಮೀಕ್ಷೆ ನಡೆಸಿದ್ದೇವೆ. ವರಿ ಜಿಲ್ಲೆಯಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದೇವೆ ಎಂದು ಹೇಳಿದರು.

ಪರಿಸ್ಥಿತಿಯನ್ನು ಗಮನಿಸಿ, ಜೋಶಿಮಠದ ಉನ್ನತ ಮಟ್ಟದ ಸಭೆಯ ನಂತರ ಅಧ್ಯಯನ ಮಾಡಲು ಮತ್ತು ಶಿಫಾರಸುಗಳನ್ನು ಸಲ್ಲಿಸಲು ಕೇಂದ್ರವು ಏಳು ವಿವಿಧ ಸಂಸ್ಥೆಗಳ ತಜ್ಞರ ತಂಡವನ್ನು ರಚಿಸಿತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಐಐಟಿ ರೂರ್ಕಿ, ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ತಜ್ಞರು ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ಪವಿತ್ರ ಪಟ್ಟಣವನ್ನು ಸಂರಕ್ಷಿಸಲು ಶಿಫಾರಸುಗಳನ್ನು ನೀಡುವ ಕಾರ್ಯವನ್ನು ನಿರ್ವಹಿಸಿದ್ದಾರೆ.

ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ತಜ್ಞರ ತಂಡವನ್ನು ರಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT