ದೇಶ

ಮಹಾರಾಷ್ಟ್ರ: ಬಸ್- ​ಟ್ರಕ್ ನಡುವೆ ಭೀಕರ​ ಅಪಘಾತ; ಶಿರಡಿಗೆ ತೆರಳುತ್ತಿದ್ದ 10 ಮಂದಿ ಯಾತ್ರಿಕರ ದಾರುಣ ಸಾವು

Shilpa D

ಮಹಾರಾಷ್ಟ್ರ: ಶಿರಾಡಿ ಸಾಯಿಬಾಬಾ ದರ್ಶನ ಪಡೆಯಲು ತೆರಳುತ್ತಿದ್ದ ಭಕ್ತರ ಐಷಾರಾಮಿ ಬಸ್​ ಮತ್ತು ಟ್ರಕ್​ ನಡುವೆ ಭೀಕರವಾಗಿ ಡಿಕ್ಕಿ ಸಂಭವಿಸಿ 7 ಮಹಿಳೆಯರು ಸೇರಿಂದತೆ 10 ಮಂದಿ ಮೃತಪಟ್ಟಿರುವ ಘಟನೆ ನಾಸಿಕ್​ನ ಸಿನ್ನಾರ್​ ಹೆದ್ದಾರಿಯಲ್ಲಿ ನಡೆದಿದೆ.

ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಬಸ್​ ಹಾಗೂ ಟ್ರಕ್​ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ರಸ್ತೆ ಅಪಘಾತದಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
 
ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ನಾಸಿಕ್‌ನ ಸಿನ್ನಾರ್ ತೆಹಸಿಲ್‌ನ ಪಥರೆ ಶಿವಾರ್ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐಷಾರಾಮಿ ಬಸ್​ನಲ್ಲಿ 50ಕ್ಕೂ ಹೆಚ್ಚು ಭಕ್ತರಿದ್ದರು. ಇವರೆಲ್ಲ ಸಾಯಿಬಾಬಾ ದರ್ಶನ ಪಡೆಯಲೆಂದು ದೇವಾಲಯಕ್ಕೆ ಹೊರಟಿರುವ ವೇಳೆ ಡಿಕ್ಕಿ ಸಂಭವಿಸಿದೆ.  ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸಿನ್ನಾರ್​ ಗ್ರಾಮೀಣಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ಗಾಯಗೊಂಡವರ ಪೈಕಿ 17 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವಾವಿ ಠಾಣಾ ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಒಳಗಾದ ಬಸ್​ ಪುಣೆಯ ಅಂಬೇರಿನಾಥ್​ ಪ್ರದೇಶಕ್ಕೆ ಸೇರಿದ್ದು ಎಂದು ಹೇಳಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಮೃತರಲ್ಲಿ ಏಳು ಮಹಿಳೆಯರು, ಇಬ್ಬರು ಸಣ್ಣ ಹುಡುಗರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಗಾಯಾಳುಗಳನ್ನು ಸಿನ್ನಾರ್ ಗ್ರಾಮಾಂತರ ಆಸ್ಪತ್ರೆ ಮತ್ತು ಸಿನ್ನಾರ್‌ನಲ್ಲಿರುವ ಯಶವಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT