ರಾಷ್ಟ್ರಪತಿ ದ್ರೌಪದಿ ಮುರ್ಮು 
ದೇಶ

ರಾಷ್ಟ್ರಪತಿ ಮುರ್ಮು ಪಾದಸ್ಪರ್ಶಿಸಲು ಯತ್ನಿಸಿದ ಇಂಜಿನಿಯರ್ ಅಮಾನತು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆಯನ್ನು ಉಲ್ಲಂಘಿಸಿ ಅವರ ಪಾದಸ್ಪರ್ಶಿಸಲು ಯತ್ನಿಸಿದ ರಾಜಸ್ಥಾನ ಸರ್ಕಾರದ ಇಂಜಿನಿಯರ್ ನ್ನು ಅಮಾನತುಗೊಳಿಸಲಾಗಿದೆ. 

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆಯನ್ನು ಉಲ್ಲಂಘಿಸಿ ಅವರ ಪಾದಸ್ಪರ್ಶಿಸಲು ಯತ್ನಿಸಿದ ರಾಜಸ್ಥಾನ ಸರ್ಕಾರದ ಇಂಜಿನಿಯರ್ ನ್ನು ಅಮಾನತುಗೊಳಿಸಲಾಗಿದೆ. 

ಜ.04 ರಂದು ನಡೆದ ಕಾರ್ಯಕ್ರಮದಲ್ಲಿ ಇಂಜಿನಿಯರ್ ದ್ರೌಪದಿ ಮುರ್ಮು ಅವರ ಪಾದ ಸ್ಪರ್ಶಿಸುವುದಕ್ಕೆ ಇಂಜಿನಿಯರ್ ಯತ್ನಿಸಿದ್ದರು. 

ಕೇಂದ್ರ ಗೃಹ ಸಚಿವಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ ನ್ನು ಅಮಾನತುಗೊಳಿಸಲಾಗಿದೆ.
 
ಅಂಬಾ ಸಿಯೋಲ್ ಎಂಬ ಪಿಹೆಚ್ ಇಡಿಯ ಕಿರಿಯ ಇಂಜಿನಿಯರ್ ಜ.04 ರಂದು ನಡೆದ ಸ್ಕೌಟ್ ಗೈಡ್ ಜಾಂಬೊರಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಪಾದ ಸ್ಪರ್ಶಿಸಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಮಾಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
 
ಸಿಯೋಲ್ ಅವರು ಕಾರ್ಯಕ್ರಮದಲ್ಲಿ ನೀರಿನ ವ್ಯವಸ್ಥೆ ನೋಡಿಕೊಳ್ಳುವುದಕ್ಕಾಗಿ ನಿಯೋಜಿಸಲ್ಪಟ್ಟಿದ್ದರು. ಆದರೆ ಭದ್ರತೆಯನ್ನು ಉಲ್ಲಂಘಿಸಿ ಆಕೆ ರಾಷ್ಟ್ರಪತಿಗಳನ್ನು ಸ್ವಾಗತಿಸುವ ಅಧಿಕಾರಿಗಳ ಸಾಲಿಗೆ ತಲುಪಿದ್ದರು. ಅಷ್ಟೇ ಅಲ್ಲದೇ ಏಕಾ ಏಕಿ ರಾಷ್ಟ್ರಪತಿಗಳ ಬಳಿಗೆ ತೆರಳಿ ಅವರ ಕಾಲಿಗೆರಗಲು ಯತ್ನಿಸಿದರು. ಆದರೆ ಆಕೆಯನ್ನು ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ತಡೆದಿದ್ದರು.

ಘಟನೆಯನ್ನು ಗೃಹ ಸಚಿವಾಲಯ ಗಂಭೀವಾಗಿ ಪರಿಗಣಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

ನನ್ನೊಂದಿಗೆ ಸೆಕ್ಸ್ ಮಾಡು, ಒಪ್ಪದೇ ಇದ್ರೆ ನಿನ್ನ ವೃತ್ತಿ ಜೀವನ ನಾಶ, ಭಾರತೀಯ ಸಹೋದ್ಯೋಗಿಗೆ ಜೆಪಿ ಮೋರ್ಗಾನ್ ಮಹಿಳಾ ಅಧಿಕಾರಿ ಬೆದರಿಕೆ

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

SCROLL FOR NEXT